ರಂಗ ಭೂಮಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ

ಬಳ್ಳಾರಿ ಮಾ 28 : ನಾಟಕಗಳಿಂದ ಉತ್ತಮವಾದ ಸಮಾಜವನ್ನುಕಟ್ಟಲು ಸಾಧ್ಯ ನಾಟಕದಲ್ಲಿ ಅಭಿನಯಿಸಿದವರು ತಮ್ಮಜೀವನವನ್ನುತಾವೇ ರೂಪಿಸಿ ಕೊಳ್ಳುವಷ್ಟು ಸಾಮಥ್ರ್ಯವನ್ನು ಹೊಂದಿರುತ್ತಾರೆಂದು ರಂಗ ಸಮಾಜದ ಸದಸ್ಯ ಶಿವೇಶ್ವರಗೌಡ ಕಲ್ಲುಕಂಬ ಅಭಿಪ್ರಾಯ ಪಟ್ಟರು .
ನಗರದ ಶ್ರೀ ಗುರುತಿಪ್ಪೇರುದ್ರ ಮಹಾವಿದ್ಯಾಲಯ (ಎಜಿಟಿ) ಆಡಿಟೋರಿಯಂನಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ವಾಗಿ ಅಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಂಗಭೂಮಿ ಪ್ರೀತಿ ಸಂಬಂಧ ಜೀವನದ ಮೌಲ್ಯಗಳನ್ನು ತಿಳಿಸುತ್ತದೆ ಸಮಾಜವನ್ನು ತಿದ್ದುವ ಒಂದು ಅತ್ಯುತ್ತಮವಾದ ಮಾರ್ಗ ಮತ್ತು ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.
ಪಶು ಸಂಗೋಪನಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರು ಡಾ.ಪಿ.ಎಲ್. ಗಾದಿಲಿಂಗನಗೌಡ ಮಾತನಾಡಿ ರಂಗ ಭೂಮಿಯು ಯುವಕರಿಗೆ ಪೊರೀತ್ಸಾಹವನ್ನು ತುಂಬಿ ಜೀವನದಲ್ಲಿನ ಉತ್ತಮ ಮಾರ್ಗವನ್ನು ಸೂಚಿಸುತ್ತದೆ ದೃಶ್ಯ ಮಾಧ್ಯಮದಿಂದ ಬೇಸತ್ತಜನಕ್ಕೆ ನಾಟಕ ಉತ್ತಮವಾದ ಮನರಂಜನೆಯ ಊಟವನು ್ನಉಣಬಡಿಸುತ್ತದೆ. ಮಕ್ಕಳಲ್ಲಿ ಧೈರ್ಯವನ್ನುತುಂಬಿ ಅವರ ಮನೋಜ್ಞಾನ ಹೆಚ್ಚಾಗಲು ಅವರ ಆಲೋಚನೆ ಚುರುಕಾಗಲು ರಂಗ ಮಾಧ್ಯಮ ಸಹಾಯವಾಗುತ್ತದೆ ಎಂದರು.
ರಂಗ ಭೂಮಿ ಕಲಾವಿದರು .ಕೆ.ಹೆಚ್. ಅಂಜಿನಪ್ಪ ಪಾವಗಡ ಹಾಗೂ ಹಿರಿಯರಂಗಭೂಮಿಕಲಾವಿದರು ಶ್ರೀಮತಿ ಲತಾಶ್ರೀ ಅವರುರಂಗಜಂಗಮ ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಮ ಕಲ್ಮಠ ನಾಟಕ ಸಾಹಿತ್ಯದ ಕುರಿತು ಮಾತನಾಡಿದರು
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಕೆ ಮಲ್ಲೇಶಪ್ಪ, ಹಾಗೂ ಪ್ರಾಂಶುಪಾಲ ನಾಗರಾಜ ಉಪಸ್ಥಿತರಿದ್ದರು.
ಸುಗಮ ಸಂಗೀತ ಕಾರ್ಯಕ್ರಮವನ್ನು ಶ್ರೀ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಎನ್.ರಾಘವೇಂದ್ರ ಗುಡ ದೂರು, ತಬಲ- ಉಮೇಶ್ ಸಂಡೂರ್, ರಂಗ ಸಂಗೀತ-ಎಸ್.ಎಂ. ಹುಲುಗಪ್ಪ , ಏಕಪಾತ್ರಾಭಿನಯ – ಶ್ರೀರಘು ರಾಮ್ ನೆರವೇರಿಸಿಕೊಟ್ಟರು
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ರಂಗ ಜಂಗಮ ಸಂಸ್ಥೆಯಅಧ್ಯಕ್ಷರಾದ ವಿಷ್ಣು ಹಡಪದ, ರಂಗಭೂಮಿ ಸಂದೇಶ ವಾಚನ ಡಿ. ಹುಲಿಯಪ್ಪ, ಕಾರ್ಯಕ್ರಮದ ನಿರೂಪಣೆ ಹೇಮೇಶ್ವರ, ವಂದನಾರ್ಪಣೆ .ಜಿ.ನಾಗರಾಜ ನೆರವೇರಿಸಿದರು .
ರಂಗ ಜಂಗಮ ಸಂಸ್ಥೆ ಡಿ ಕಗ್ಗಲ್ ಮತ್ತು ಶ್ರೀ ಗುರುತಿಪ್ಪೇರುದ್ರ ಮಹಾವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಕಾರ್ಯ ಕ್ರಮ ಆಯೋಜಿಸಲಾಗಿತ್ತು.