ರಂಗ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೆಪಿಸಿ


ಧಾರವಾಡ, ಎ.21-ಈಗಿನ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ರಂಗ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೆಪಿಸಬೇಕು.ಇದರಿಂದ ಅವರಲ್ಲಿ ಹೊಸ ಚಿಂತನೆಗಳು ಹುಟ್ಟುವ ಮೂಲಕ ಮುಂದೆ ಉತ್ತಮ ಸಮಾಜವನ್ನು ಪೂರಕವಾಗಿರುತ್ತಾರೆ ಎಂಬ ಕಲ್ಪನೆಯೊಂದಿಗೆ ಜಗುಚಂದ್ರ ಮಕ್ಕಳ ರಂಗಭೂಮಿಯಲ್ಲಿ ತೊಡಗಿರುವ ಕಾರ್ಯವನ್ನು ಸ್ಮರಿಸುವ ಸ್ನೇಹಿತರು, ಶಿಷ್ಯರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿಗಳಾದ ಡಾ.ವೀರಣ್ಣ ರಾಜೂರ ಹೇಳಿದರು.
ಅವರು ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಚಂದ್ರ ಸ್ಪೂರ್ತಿ ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆಯ ಉದ್ಘಾಟನೆ ಮತ್ತು ನಾಟಕೋತ್ಸವಕ್ಕೆ ಚಂದ್ರ ಸ್ಪೂರ್ತಿಯ ಲೋಗೋ ಬಿಡುಗಡೆ ಮಾಡಿ ಮಾತನಾಡುತ್ತಾ ಆನ್ಲೈನ್ ಬೊಗಸೆಯಲ್ಲೇ ಜಗತ್ತನ್ನು ತೆರೆದಿಡುತ್ತದೆ. ಸಿನಿಮಾ ನೋಡಲೂ ಥಿಯೇಟರ್ಗೆ ಹೋಗಬೇಕಿಲ್ಲ. ಹಾಗಿದ್ದರೆ ನಾಟಕ ನೋಡುವವರುಂಟೇ? ಈ ಸಂದೇಹಕ್ಕೆ ಆಸ್ಪದವಿಲ್ಲ. ರಂಗಾಸಕ್ತರು ಇಂದಿಗೂ ಇದ್ದಾರೆ. ರಂಗಭೂಮಿಯೂ ನಿತ್ಯ ಹೊಸದಾಗೇ ಇದೆ ಇದರಲಿ ನಿರಂತತೆ ಇದೆ. ಜಗುಚಂದ್ರ ಹಲವಾರು ಶಿಷ್ಯ ಬಳಗವನ್ನು ಹುಟ್ಟು ಹಾಕಿದ್ದರಿಂದ ರಂಗಭೂಮಿಯೊಂದಿಗೆ ಅವರು ಜೀವಂತವಾಗಿದ್ದಾರೆ ಎಂದು ಹೇಳಿದರು.ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ ಶಿಕ್ಷಣದೊಂದಿಗೆ ನಾಟಕ ಅಳವಡಿಸಿ ಉತ್ತಮ ಕಲಿಕೆಗೆ ಪ್ರೇರಣೆಯಾದವರು ಜಗುಚಂದ್ರ ಎಂದು ಹೇಳಿದರು.ಎಸ್.ಎಸ್.ಚಿಕ್ಕಮಠ ಮಾತನಾಡಿ ಅಬಕಾರಿ ಮಿತ್ರ ಮಾಸ ಪತ್ರಿಕೆ ಜಗುಚಂದ್ರ ಬರೆದ ಲೇಖನ ಮತ್ತು ಅವರ ಒಡನಾಟದ ಕುರಿತು ಅನುಭವ ಹಂಚಿಕೊಂಡರು.
ಸಾಹಿತಿಗಳಾದ ಮಾರ್ತಾಂಡಪ್ಪ ಎಮ್ ಕತ್ತಿ ಮಾತನಾಡಿ ಕಷ್ಟದ ದಿನಗಳನ್ನು ಕಳೆದು ಸಂತೋಷದ ದಿನಗಳನ್ನು ಕಳೆಯಬೇಕೆನ್ನುವ ಸಂದರ್ಭದಲ್ಲಿ ಇಲ್ಲ ಎನ್ನುವುದು ಮತ್ತು ಶಿಷ್ಯಬಳಗದ ಜೊತೆ ಸಂತೋಷ ಕ್ಷಣ ಕಳೆಯಬೇಕು ಎನ್ನುವ ಸಮಯದಲ್ಲಿ ಇಲ್ಲ ಎನ್ನುವುದು ನೋವಿನ ಸಂಗತಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಚೇತನಕುಮಾರ ಕುಲಕರ್ಣಿ ಮಾತನಾಡಿ ಜಗುಚಂದ್ರ ಮತ್ತು ನಾಟಕಗಳ ಜೊತೆ ಕಲಿತ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಪರಿಪೂರ್ಣ ಚೌಕಿಮಠ ನಿರೂಪಿಸಿದರು. ಸುರೇಶ ಬೆಟಗೇರಿ ಸ್ವಾಗತಿಸಿ, ವಂದಿಸಿದರು. ವಿಜಯಕುಮಾರ ದೊಡಮನಿ ಪ್ರಾಸ್ತಾವಿಕ ಮಾತನಾಡಿದರು. ನಂತರ ಚೇತನ ಕುಲಕರ್ಣಿ ಅವರ ನಿರ್ದೇಶನದ ಹೀರೋಯಿನ್ ಬೇಕಾಗಿದ್ದಾಳೆ ಎಂಬ ನಾಟಕ ಪ್ರದರ್ಶನ ನಡೆಯಿತು. ಈ ನಾಟಕದಲ್ಲಿ ಸೋಮಶೇಖರ್ ಕರಡಿ, ಶೀತಲ್ ಕುಮಾರ, ಸಂತೋಷ್ ಯರಗೊಳ, ಮಹೇಶ್ ಪಟ್ಟಿಹಾಳ್, ವಿಜಯ ಪಟ್ಟಿಹಳ, ಬಸವರಾಜ್ ಗುಡ್ಡಪ್ಪನವರ್ ಅಭಿನಯಿಸಿದರು.