ರಂಗ ಕಲೆಗೆ ಪ್ರೋತ್ಸಾಹ ಅಗತ್ಯ

 ಹಿರಿಯೂರು : ಸೆ.20-ರಂಗ ಕಲೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಮಾಜಿ ಪುರಸಭೆ ಅಧ್ಯಕ್ಷರಾದ ವಿ ಹೆಚ್ ರಾಜು ಹೇಳಿದರು. ಶ್ರೀ ಕುಮಾರೇಶ್ವರ ರಂಗಮಂದಿರದಲ್ಲಿ ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಸಹಯೋಗದಲ್ಲಿ ಸಿ.ಕೆ ನಳಿನ ಮತ್ತು ತಂಡದವರಿಂದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಹಾತ್ಮೆ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀ ಕುಮಾರೇಶ್ವರ ನಾಟಕ ಮಂಡಳಿಯವರು ಇಂದಿಗೂ ನಾಟಕ ಕಲೆಯನ್ನು ಜೀವಂತವಾಗಿ ಉಳಿಸಿ ಬೆಳೆಸುವಲ್ಲಿ ತುಂಬಾ ಮಹತ್ತರವಾದಂತಹ ಪಾತ್ರವನ್ನು ವಹಿಸಿದ್ದಾರೆ ಅವರ ಇಡೀ ತಂಡಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಹೇಳಿದರು. ಪುರಸಭೆ ಮಾಜಿ ಸದಸ್ಯರು ಹಾಗೂ ಕಲಾವಿದರಾದ ಧನಂಜಯ ಕುಮಾರ್ ಮಾತನಾಡಿ ಹಿರಿಯೂರಿನಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ನಾಟಕ ಪ್ರದರ್ಶನವನ್ನು ನಡೆಸಿಕೊಟ್ಟ ಶ್ರೀ ಕುಮಾರೇಶ್ವರ ನಾಟಕ ಮಂಡಳಿ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ  ಧನ್ಯವಾದಗಳನ್ನು ಅರ್ಪಿಸಿದರು. ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷರಾದ ಎಲ್ ನಾರಾಯಣ ಚಾರ್ ಇವರು ಮಾತನಾಡಿ ನಾಡಿನ ಕಲೆ ಸಂಸ್ಕೃತಿಯನ್ನು ಕಲಾವಿದರು, ಉಳಿಸಿ ಬೆಳೆಸುತ್ತಿದ್ದಾರೆ ಅವರಿಗೆ ಎಷ್ಟು ಧನ್ಯವಾದಗಳು ತಿಳಿಸಿದರು ಕಡಿಮೆಯೇ ಎಂದು ಹೇಳಿದರು. ನಾಟಕ ಮಂಡಳಿಯ ಮಾಲೀಕರಾದ ಕುಮಾರಸ್ವಾಮಿ ಯವರು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸುಧಾಮಣಿಯವರು, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಆರ್ ವೆಂಕಟೇಶ್, ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಸಿ ಆರ್ ಏಕಾಂತಪ್ಪ ಮತ್ತಿತರರು ಭಾಗವಹಿಸಿದ್ದರು. ಹಿರಿಯರಂಗಭೂಮಿ ಕಲಾವಿದರಾದ ಬಿ ಕುಮಾರಸ್ವಾಮಿ, ಶ್ರೀಮತಿ ಕೆ ಸುಧಾಮಣಿ, ಡಿ ರಾಮಸ್ವಾಮಿ, ಎನ್. ಮಲ್ಲ ನಾಯಕ, ಆರ್. ತಿಪ್ಪೇರುದ್ರಣ್ಣ, ಸಂಗೀತ ವಿದುಷಿ ಹಾಗೂ ಗಾಯಕಿ ಶ್ರೀಮತಿ ತ್ರಿವೇಣಿ ಯವರಿಗೆ ಸನ್ಮಾನಿಸಲಾಯಿತು. ಉಚಿತ ನಾಟಕ ಪ್ರದರ್ಶನ ಹಾಗೂ ಪೂಜಾ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.