ರಂಗೋಲಿ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಣೆ

ಸೇಡಂ, ಎ,11: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ
ತಾಲೂಕಾ ಆಡಳಿತ ಸೌಧದ ಮುಂದುಗಡೆ ಸ್ವೀಪ್ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮತದಾನ ಜಾಗೃತಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು, ಭಾಗವಹಿಸಿದ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರಿಗೆ ಪ್ರಮಾಣ ಪತ್ರವನ್ನು ವಿಜೇತರಿಗೆ ಸಹಾಯಕ ಚುನಾವಣಾಧಿಕಾರಿ ಆಶಪ್ಪ ಕೆಎಎಸ್ ಅವರು ವಿತರಿಸಿ ಮಾತನಾಡಿದರು. ಈ ವೇಳೆ ತಹಸಿಲ್ದಾರ್ ಶಿವಾನಂದ್ ಮೇತ್ರೆ, ತಾಪಂ ಇಓ ಚನ್ನಪ್ಪ ರಾಮಣ್ಣನವರ, ಗ್ರೇಡ್ ಟು ತಹಸಿಲ್ದಾರ್ ಸಿದ್ಧರಾಮ ನಾಚವರ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.