ರಂಗೋಲಿ ಮೂಲಕ ಮತ ಜಾಗೃತಿ


ಮೊಳಕಾಲ್ಮೂರು,ಏ.17:  ಇಂದು ತಾಲೂಕು ಪಂಚಾಯಿತಿ ಆವರಣದ  ತುಂಬ ರಂಗೋಲಿಗಳ ರಂಗು. ತಾಲೂಕು ಪಂಚಾಯಿತಿ ಸ್ವೀಫ್ ವತಿಯಿಂದ ಒಂದು ವಾರದಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯುತ್ತಾ ಬಂದಿದ್ದು,ತಹಶೀಲ್ದಾರ್ ಎಂ.ವಿ.ರೂಪ  ಮತ್ತು ಇಓ ಜಾನಕೀ ರಾಮ್ ರವರ ನೇತೃತ್ವದಲ್ಲಿ ತಾಲೂಕಿನ 16 ಪಂಚಾಯಿತಿಗಳಲ್ಲಿ 16 ಜನ ಪಿಡಿಓ ಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಜೊತೆ ಗೂಡಿ ಬೈಕ್  ರ್ಯಾಲೀ ಮೂಲಕ ಮತದಾನ ಮಹಾದಾನ, ದಾನದಲ್ಲಿ ದಾನ  ಮತದಾನ ಶ್ರೇಷ್ಠ   ಎಂಬ ನಾಣ್ಣುಡಿ ಫಲಕಗಳನ್ನು ಹೊತ್ತು ಪ್ರತಿ ಗ್ರಾಮ ಪಂಚಾಯಿತಿಯ ಪ್ರತಿ ಗ್ರಾಮದಲ್ಲಿ ಮತದಾನ ಜಾಗೃತಿ ಬಗ್ಗೆ ಅರಿವು ಮೂಡಿಸುವ ಜಾಗೃತಿ ಜಾಥಾ ನಡೆಸಲಾಯಿತು.
ಇಂದು ತಾಲೂಕು ಪಂಚಾಯಿತಿ ಆವರಣದಲ್ಲಿ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಅದು ರಂಗೋಲಿಗಳ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ತಾಲೂಕು ಪಂಚಾಯಿತಿಯ ಆವರಣವೆಲ್ಲಾ ಮಹಿಳೆಯರು, ಮಕ್ಕಳು ಕೈಯಲ್ಲಿ ರಂಗೋಲಿ ಹಿಟ್ಟು ಮತ್ತು ಬಣ್ಣದ ಪಾಕೇಟ್ ಗಳನ್ನು ಹಿಡಿದುಕೊಂಡು ವರ್ಣರಂಜಿತವಾದ ರಂಗೋಲಿ ಗಳನ್ನು ಬಿಡಿಸುವ ಕಾಯಕ ಅಪರೂಪವಾಗಿತ್ತು. ಪ್ರತಿಯೊಬ್ಬರ ಪ್ರತಿಯೊಂದು ರಂಗೋಲಿಯು ಸಾರಿ ಸಾರಿ ಹೇಳುವಂತಿದ್ದವು “ಮತದಾನ ಮಹಾ ದಾನ, ಕಡ್ಡಾಯ ಮತದಾನ ಎಲ್ಲರ ಹಕ್ಕು” ಎಂಬ ಬರಹ ಗಳೊಂದಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದವು.
 ಶ್ರೇಷ್ಠ ವಾದ ರಂಗೋಲಿ ಗಳಿಗೆ ಶ್ರೇಣಿಯ ಮೂಲಕ ಪ್ರಮಾಣ ಪತ್ರ ಮತ್ತು ಬಹುಮಾನ ವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ರಮೇಶ್ ಕುಮಾರ್, ಇಓ. ಕೆ. ಓ. ಜಾನಕೀ ರಾಮ್, ಪ ಸಂ ಸ ನೀ ರಂಗಪ್ಪ, ವ್ಯವಸ್ಥಾಪಕರಾದ ನಂದೀಶ್, ಎಡಿ. ಗಣೇಶ್, ಗ ಯಂ ಮಧು ಕುಮಾರ್, ಪಿಡಿಒ ಕರಿ ಬಸಪ್ಪ,  ದಿ ಸ ರಾಜಶೇಖರ್, ಮತ್ತು  ಇಂಜಿನಿಯರ್ ಗಳು ಮತ್ತು ಸಿಬ್ಬಂದಿ ಗಳು  ಮತ್ತು ಮಹಿಳೆಯರು ಉಪಸ್ಥಿತರಿದ್ದರು.
 ರಂಗೋಲಿ ಸ್ಪರ್ಧೆಯಲ್ಲಿ ರಾಂಪುರ ಗ್ರಾಮದ ಗಾಯತ್ರಿ ಮತ್ತು ಮಾಲತಿ ಯವರು ಮೊದಲನೇ ಬಹುಮಾನ ಪಡೆದುಕೊಂಡರು.