ರಂಗೋಲಿ ಚಿತ್ತಾರ, ಮತದಾರರ ಜಾಗೃತಿಗೆ ಘೋಷವಾಕ್ಯಗಳ ಅನಾವರಣ

ಸಂಜೆವಾಣಿ ವಾರ್ತೆ
ದಾವಣಗೆರೆ ಏ.೨೩; ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಇವರುಗಳ ಸಹಾಯದೊಂದಿಗೆ  ನಗರದ ಗುರುಭವನದ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಮಾತನಾಡಿ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದ ಹಳ್ಳಿಗಳಿಂದ ಬಂದಿರುವ ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತರು ಬಗೆ ಬಗೆಯ ರಂಗೋಲಿಯ ಚಿತ್ರಗಳನ್ನು ಬಿಡುಸುವ ಮೂಲಕ ಮತದಾನ ಜಾಗೃತಿ ಮೂಡಿಸಿರುವುದು ಹೆಮ್ಮೆಯ ವಿಷಯವಾಗಿದೆ. ಮತದಾರರು ಸಹ ಹೆಮ್ಮೆಯಿಂದ ತಮ್ಮ ಮತ ಚಲಾಯಿಸುವಂತಾಗಬೇಕೆಂದರು. ರಂಗೋಲಿ ಮೂಲಕ ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮತದಾರರು, ಮತದಾನ ಮೂಲಭೂತ ಕರ್ತವ್ಯ, ನಮ್ಮ ದೇಶ ಸೇವಕರಿಗೆ ನಾವು ನೀಡುವ ಅಮೂಲ್ಯವಾದ ದಾನವೇ ಮತದಾನ, ಮತದಾನ ಮಾಡಿದರೇ ಮಾತ್ರ, ಆ ಹಕ್ಕಿಗೆ ಅರ್ಥ ಸಿಗುತ್ತದೆ. ಮೇ 7 ರಂದು ತಪ್ಪದೇ ಮತ ಚಲಾಯಿಸಿ ಎಂಬಿತ್ಯಾದಿ ಘೋಷವಾಕ್ಯಗಳೊಂದಿಗೆ ರಂಗೋಲಿ ಬಿಡಿಸಲಾಯಿತು.  ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿ ಅಶೋಕ್ ಕಾಂಬ್ಲೆ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೇತ್ರಾವತಿ .ಜಿ,  ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.