ರಂಗೋಲಿಯಲ್ಲಿ ಅರಳಿದ ವಿಜ್ಞಾನ

ಭಾಲ್ಕಿ:ಜ.11:ವಿಜ್ಞಾನವು ಮಾನವನ ಅಸ್ತಿತ್ವದ ಮೂಲಭೂತ ಭಾಗವಾಗಿದೆ ವಿಜ್ಞಾನದ ಹಲವಾರು ಅದ್ಭುತಗಳು ಆಧುನಿಕ ಜಗತ್ತನ್ನು ಮಹತ್ತರವಾಗಿ ರೂಪಿಸಿವೆ ಎಂದು ವಿದ್ಯಾಭಾರತಿ ಶಾಲೆಯ ಅಧ್ಯಕ್ಷ ರೋಹಿತ್ ವೈರಾಗೆ ಅಭಿಪ್ರಾಯಪಟ್ಟರು.
ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ ಏರ್ಪಡಿಸಿದ ವಿಜ್ಞಾನದ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸುವ ಸ್ಪರ್ಧೆ ಯಲ್ಲಿ ತೀರ್ಪುಗಾರರಾಗಿ ಮಾತನಾಡಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ, ಅದ್ಭುತವಾಗಿ ರಂಗೋಲಿಯಲ್ಲಿ ವಿಜ್ಞಾನವನ್ನು ಬಿಡಿಸಿದ್ದೀರಿ ನನಗೆ ತೀರ್ಪು ನೀಡಲು ಅತ್ಯಂತ ಕಷ್ಟವಾಗುತ್ತದೆ ಎಂದರು.
ಅತಿಥಿಯಾಗಿ ಆಗಮಿಸಿದ ಡಾ. ಮಹೇಶ್ ಭಾಲ್ಕೆ ಮಾತನಾಡಿ ಮಕ್ಕಳಲ್ಲಿ ಆಗಾದ ಶಕ್ತಿ ಸೂಪ್ತವಾಗಿರುತ್ತದೆ. ಅದನ್ನು ಹೊರತೆಗೆಯಲು ಇಂತಹ ಸ್ಪರ್ಧೆಗಳು ಅವಶ್ಯಕ ಎಂದು ತಿಳಿಸಿದರು.
ಸದ್ಗುರು ವಿದ್ಯಾಲಯದ ಅಧ್ಯಕ್ಷ ಅಕ್ಷಯಕುಮಾರ್ ಮುದ್ದಾ ಮಾತನಾಡಿ ವಿಜ್ಞಾನ ಎಲ್ಲಾ ವಿಷಯಗಳ ತಾಯಿ ಬೇರು ಇದ್ದಹಾಗೆ. . ವಿಜ್ಞಾನವನ್ನು ಚಟುವಟಿಕೆಯ ಮೂಲಕ ಕಲಿತಾಗ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಮಕ್ಕಳು ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಸೃಜನಾತ್ಮಕ ಗುಣಗಳು ಬೆಳೆಯುತ್ತವೆ ಎಂದರು.
ಶಾಲಾ ನಿರ್ದೇಶಕಿ ಅಶ್ವಿನಿ ಮುದ್ದಾ, ಆಡಳಿತಾಧಿಕಾರಿ ವೀರಣ್ಣ ಪರಶಣ್ಣೆ, ಶಾಲಾ ಮುಖ್ಯಸ್ಥ ರಾಜಕುಮಾರ ಮೇತ್ರೆ, ಪ್ರೌಢ ವಿಭಾಗದ ಮುಖ್ಯಸ್ಥರು, ವಿಜ್ಞಾನ ವಿಷಯದ ಶಿಕ್ಷಕಿ ಸುಶ್ಮಿತಾ ಸಹಾನೆ , ವಿದ್ಯಾರ್ಥಿಗಳು ಹಾಜರಿದ್ದರು.