ರಂಗೋಲಿ,ಮೆಹಂದಿ ಸ್ಪರ್ಧೆ:ಮಹಿಳೆಯರ ಉತ್ಸಾಹ

ಕಲಬುರಗಿ,ಫೆ 26: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮಹಿಳಾ ಉತ್ಸವ ಏರ್ಪಡಿಸಲಾಗಿತ್ತು. ಈ ಉತ್ಸವದಲ್ಲಿ ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು.
ಮೆಹಂದಿ ಸ್ಪರ್ಧೆ:
ಮೆಹಂದಿ ಸ್ಪರ್ಧೆಗೆ ಒಂದು ತಾಸಿನ ಕಾಲಾವಕಾಶ ನೀಡಲಾಗಿತ್ತು. ಈ ಸ್ಪರ್ಧೆ ಯಲ್ಲಿ ಕಲಬುರಗಿ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವಿಜೇತರಾದವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ರಂಗೋಲಿ ಸ್ಪರ್ಧೆಯಲ್ಲಿ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ ಹಲವಾರು ಮಹಿಳಾ ಸ್ಪರ್ಧಾಳುಗಳು ಭಾಗವಹಿಸಿದ್ದರು. 18 ರಿಂದ 25 ವರ್ಷ ಒಳಗಿನ ಹಾಗೂ 26 ರಿಂದ 45 ವರ್ಷ ಒಳಗಿನ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ರಂಗೋಲಿ ಬಿಡಿಸಲು ಎರಡು ತಾಸುಗಳ ಕಾಲಾವಕಾಶ ನೀಡಲಾಗಿತ್ತು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗೌರವಧನದ ಬಹುಮಾನ ನೀಡಲಾಗುತ್ತದೆ.
ಮೊದಲ ಸ್ಥಾನ ಪಡೆದವರಿಗೆ ರೂ 5000 ಗಳ ಬಹುಮಾನ, ಎರಡನೆಯ ಸ್ಥಾನ ಪಡೆದವರಿಗೆ ರೂ 4000 ಗಳ ಬಹುಮಾನ ಹಾಗೂ ಮೂರನೆಯ ಸ್ಥಾನ ಪಡೆದವರಿಗೆ ರೂ 3000 ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಹಾಗೂ ಉಳಿದವರಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.