ರಂಗೇರಿದ ಅಮೆರಿಕಾ ಚುನಾವಣೆ ಟ್ರಂಪ್ ವಿರುದ್ದ ಜೋ ಬೀಡೆನ್ ವಾಗ್ದಾಳಿ

ವಾಷಿಂಗ್ಟನ್, ಸೆ.೧೧- ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಅಧ್ಯಕ್ಷೀಯ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರತಿ ಪಕ್ಷದ ಅಭ್ಯರ್ಥಿ ಜೋ ಬಿಡೇನ್ ನಡುವೆ ಮಾತಿನ ಸಮರಕ್ಕೆ ವೇದಿಕೆ ಮಾಡಿದೆ.
ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಹಾಗು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ನಡುವೆ ಶತಾಯ ಗತಾಯ ಅಭ್ಯರ್ಥಿ ನಡುವೆ ವಿಶ್ವದ ದೊಡ್ಡಣ್ಣನ ಗಾದಿಗಾಗಿ ಆರೋಪ ಪ್ರತ್ಯಾರೋಪ, ತಿರುಗೇಟು ವಿನಿಮಯ ವಾಗುತ್ತಿದೆ.
ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಕಮಲ ಹ್ಯಾರೀಸ್ ಅವರು ಒಂದು ವೇಳೆ ಆಯ್ಕೆಯಾದರೆ ಅಮೆರಿಕ ಜನತೆಗೆ ಅವಮಾನ ಎಂದು ಅಧ್ಯಕ್ಷ ಟ್ರಂಪ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಜೋ ಬೀಡೆನ್ ಅವರು, ಮಹಿಳೆಯ ಬಗ್ಗೆ ಅಸಹ್ಯಕರವಾಗಿ ಮಾತನಾಡುವ ಮೂಲಕ ತಮ್ಮತನವನ್ನು ನಿರೂಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾಲ್ಕು ವರ್ಷಗಳ ಅವಧಿಯಲ್ಲಿ ಮಾಡಿರುವ ಕೆಲಸಗಳ ಮತ್ತು ಅವರ ವರ್ತನೆ ಅಮೇರಿಕಾದ ಜನರಲ್ಲಿ ಅಸಹನೆ ತರಿಸಿವೆ ಈ ಬಾರಿಯ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಹೀಗಿರುವಾಗ ಅವರ ಆರೋಪಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಜೋ ಬೀಡೆನ್ ಹೇಳಿದ್ದಾರೆ.
ನಾಲ್ಕು ವರ್ಷಗಳ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಜನರಿಗೆ ಮೋಸ ಮಾಡುವ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ.ಇದು ಜನರಲ್ಲಿ ಅಸಮಾಧಾನವನ್ನು ತರಿಸಿದೆ ಕೋರೋನೋ ಸೋಂಕಿನ ವಿಷಯದಲ್ಲೂ ಟ್ರಂಪ್ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನವಂಬರ್ ೩ ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮೇಲೆ ಮತಯಾಚಿಸುವ ಬದಲು ಡೊನಾಲ್ಡ್ ಟ್ರಂಪ್ ಅವರು ತಮ್ಮ ಹಾಗೂ ತಮ್ಮ ಕುಟುಂಬ ಮತ್ತು ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಕಮಲ ಅವರ ಮೇಲೆ ಕೀಳಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
ಜೋ ಬಿಡೆನ್ ಅವರು ಅಮೆರಿಕ ಅಧ್ಯಕ್ಷರಾದರೆ ಅಮೆರಿಕವನ್ನು ವಿವಿಧ ದೇಶಗಳಿಗೆ ಮಾರಿಬಿಡುತ್ತಾರೆ ಎಂದು ನೇರವಾಗಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ ಇದಕ್ಕೆ ಪ್ರತಿಯಾಗಿ ಅವರು ಕೂಡ ಜೋ ಬೀಡೆನ್ ಅವರೂ ಕೂಡ ಪ್ರತಿದಾಳಿ ನಡೆಸಿದ್ದಾರೆ.
ಅಮೆರಿಕದ ವಿವಿಧ ಭಾಗಗಳಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಈಗಾಗಲೇ ಅತೃಪ್ತಿ ಅಸಮಾಧಾನ ಹೊಗೆಯಾಡುತ್ತಿದೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಜೋ ಬೀಡೆನ್ ನಿರ್ಧರಿಸಿದ್ದು ಟ್ರಂಪ್ ಹೇಳಿಕೆಗೆ ಪ್ರಚಾರದ ಸಮಯದಲ್ಲಿ ಸೂಕ್ತ ತಿರುಗೇಟು ನೀಡುತ್ತಾ ಅಮೆರಿಕದ ಗೌರವ ಘನತೆಯನ್ನು ಮತ್ತೊಮ್ಮೆ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಭರವಸೆಯನ್ನು ಅವರು ಜನತೆಗೆ ನೀಡುತ್ತಿದ್ದಾರೆ.
ಬಾರಕ್ ಒಬಾಮಾ ಅವರು ಅಮೆರಿಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಲ್ಲಿಯೂ ಕೂಡ ಅಮೆರಿಕದ ಘನತೆ-ಗೌರವಕ್ಕೆ ನಡೆದುಕೊಂಡಿದ್ದೇನೆ ಈ ಬಾರಿ ತಮಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂದು ಜೋ ಬೀಡೆನ್ ಹೇಳಿದ್ದಾರೆ.
ತಮ್ಮ ಕೆಲಸ ಕಾರ್ಯಗಳು ಏನು ಡೊನಾಲ್ಡ್ ಟ್ರಂಪ್ ಅವರ ಕೆಲಸ-ಕಾರ್ಯಗಳು ಏನು ಎನ್ನುವುದು ಅಮೆರಿಕದ ಜನತೆಗೆ ಗೊತ್ತಿದೆ ಈ ಬಗ್ಗೆ ಹೆಚ್ಚಿನ ವಿಷಯದ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಚುನಾವಣೆಯಲ್ಲಿ ಜನರೇ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ