ರಂಗು ರಂಗಿನ ಬಣ್ಣದಲ್ಲಿ  ಮಿಂದೆದ್ದ ಚಿಣ್ಣರು


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.08 ಹೋಳಿ ಹಬ್ಬದ ಪ್ರಯುಕ್ತ ಮಕ್ಕಳು ಪರಸ್ಪರ ಬಣ್ಣವನ್ನು ಎರಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು.
 ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮದ ಯುವಕರು ಯುವತಿಯರು ಮತ್ತು ಮಕ್ಕಳು ಸೇರಿದಂತೆ ಇಂದು ಮುಂಜಾನೆಯ ಏಳು ಗಂಟೆಯಿಂದ ವಿವಿಧ ಬಣ್ಣಗಳನ್ನು ನೀರಿನಲ್ಲಿ ಬೆರೆಸಿ ಎರೆಚಿಕೊಳ್ಳುವ ಮೂಲಕ ಸಂತೋಷ ಪಟ್ಟರು.
 ಪಟ್ಟಣದ ಬಸವೇಶ್ವರ ಬಜಾರ, ಹಳೆ ಊರು, ಕೂಡ್ಲಿಗಿ  ಸರ್ಕಲ್, ರಾಮನಗರ, ರೈತರ ಓಣಿ ಸೇರಿದಂತೆ ಅನೇಕ ಕಡೆ ತಂಡೋಪ ತಂಡವಾಗಿ ಯುವಕರು ಕೇಕೆ ಹಾಕುತ್ತಾ    ಸಂಭ್ರಮಿಸಿದರು.