ರಂಗಿನಾಟ ಬಣ್ಣದಲ್ಲಿ ಮಿಂದೆದ್ದ ಯುವಕರ ಪಡೆ!

ತಾಳಿಕೋಟೆ:ಮಾ.10: ಹೋಳಿ ಹುಣ್ಣಿಮೆಯ ರಂಗಿನಾಟವು ಈ ಭಾರಿ ಸಂಭ್ರಮವೂ ಸಂಭ್ರಮವೋ ಎಂಬಂತೆ ಎಲ್ಲಲ್ಲೋ ಯುವಕರ ತಂಡಗಳು ರಂಗಿನಾಟದ ಎರಡನೇ ದಿನ ಗುರುವಾರರಂದು ಬೀದಿ ಬೀದಿಗಳಲ್ಲಿ ಹಲಗೆ ಮಜಲುಗಳೊಂದಿಗೆ ಸುತ್ತಾಡುತ್ತಾ ಆತ್ಮೀಯರಿಗೆ ಹಿತೈಷಿಗಳಿಗೆ ಸ್ನೇಹಿತರಿಗೆ ಬಣ್ಣ ಏರಚುತ್ತಾ ಸಾಗಿದ್ದರಿಂದ ಈ ಭಾರಿಯ ಬಣ್ಣದೋಕುಳಿಗೆ ಹೊಸ ಮೆರಗುಬಂದತ್ತಾಗಿತ್ತು.

      ಕೆಲವು ಬಡಾವಣೆಗಳಲ್ಲಿ ಯುವಕರ ಪಡೆ ಹಲಗೆ ವಿವಿಧ ಮಜಲುಗಳೊಂದಿಗೆ ಪ್ರತಿ ಬಡಾವಣೆಗಳಲ್ಲಿ ಸಂಚರಿಸುತ್ತಾ ಆತ್ಮೀಯ ಸ್ನೇಹಿತರಿಗೆ ಪರಸ್ಪರ ಬಣ್ಣ ಹಚ್ಚುತ್ತಾ ಖುಷಿ ಪಡುತ್ತಿದ್ದರೆ ಕೆಲವು ಯುವಕರು ಯುವತಿಯರ ಉಡುಪುಗಳನ್ನು ತೊಟ್ಟು ತಮಾಷೆಯ ರೀತಿಯಲ್ಲಿ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸಿದರು.
     ಪಟ್ಟಣದ ಶಿವಾಜಿ ಮಹಾರಾಜ ವೃತ್ತದಲ್ಲಿ ಆಯೋಜಿಸಲಾದ ಡಿಜೆ ಕುಣಿತಕ್ಕೆ ಅಪಾರ ಸಂಖ್ಯೆಯಲ್ಲಿ ಯುವ ಸಮೂಹ ಜಮಾವಣೆಗೊಂಡಿತ್ತಲ್ಲದೇ ಡಿಜೆ ವಿವಿಧ ಹಾಡುಗಳಿಗೆ ತಕ್ಕಂತೆ ಹೆಜ್ಜೆಗಳನ್ನು ಹಾಕಿ ಸಂಭ್ರಮಿಸಿದರು.

ಅಣಕು ಶವಯಾತ್ರೆ :

ಸಾಯಂಕಾಲ ಅನೇಕ ಬಡಾವಣೆಗಳಲ್ಲಿ ಅಣಕು ಶವಯಾತ್ರೆಯನ್ನು ಆಯೋಜಿಸಲಾಗಿತ್ತಲ್ಲದೇ ಶವಯಾತ್ರೆಯ ಮುಂದೆ ಸೀರೆ ತೊಟ್ಟ ಯುವಕನೋರ್ವ ಹಾಡ್ಯಾಡಿಕೊಂಡು ಅಳುವ ದೃಶ್ಯಗಳು ನೇರೆದಿದ್ದ ಮಹಿಳೆಯರಿಗೆ ಹಿರಿಯರಿಗೆ ನಗೆಗಡಲಿನಲ್ಲಿ ತೇಲುವಂತೆ ಮಾಡಿತು.

ಮಜಾ ಉಡಾಯಿಸಲು ಹೋದ್ರು

  ಇನ್ನೂ ಕೆಲವು ಯುವಕರು ಬಣ್ಣದ ಸಮಯದಲ್ಲಿ ಆಗುವ ಸಮಸ್ಯೆಗಳಿಗೆ ಸಿಕ್ಕಿಕೊಳ್ಳುವದು ಬೇಡಾ ಎಂದು ಊರಿಂದಾಚೆಯ ಹೊಲಗದ್ದೆಗಳಲ್ಲಿ ಪಾರ್ಟಿಯ ನೆಪದ ಮೇಲೆ ತೆರಳಿದರೆ ಇನ್ನೂ ಕೆಲವು ಯುವಕರು ದೇವರದರ್ಶಕ್ಕೆಂದು ಮತ್ತು ಕೆಲವರು ಗೋವಾ ಇನ್ನಿತರಕಡೆಗಳ ಮಜಾ ಉಡಾಯಿಸಲು ತೆರಳಿದ್ದು ಕಂಡುಬಂದಿತು.
    ಬಹುತೇಕ ಹಿರಿಯರು ಬಣ್ಣದಾಟದಲ್ಲಿ ಪಾಲ್ಗೊಂಡರಲ್ಲದೇ ಮನೆಯಲ್ಲಿಯ ಚಿಣ್ಣರು ಮಹಿಳೆಯರು ಮನೆಯ ಸುತ್ತಮುತ್ತಲಿನ ಆತ್ಮೀಯ ಬಂದು ಮಿತ್ರರೊಂದಿಗೆ ಸ್ನೇಹಿತರೊಂದಿಗೆ ಬಣ್ಣದಾಟವಾಡುವದರೊಂದಿಗೆ ವಿವಿಧ ಬಗೆಯ ಹಾಡುಗಳನ್ನು ಹಾಡುತ್ತಾ ಹೆಜ್ಜೆ ಹಾಕಿ ಖುಷಿ ಪಟ್ಟರು.

ರಂಗಿನಾಟದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಪಿ.ಎಸ್.ಆಯ್.ಸುರೇಶ ಮಂಟೂರ ಅವರು ತಮ್ಮ ಪೊಲೀಸ್ ಸಿಬ್ಬಂದಿಗಳೊಂದಿಗೆ ಪಟ್ಟಣದಲ್ಲಿ ಯೋಗ್ಯ ಬಂದೋಬಸ್ತ ಕೈಗೊಂಡಿದ್ದರು.