ಮಂಡ್ಯ: ಮಾ.26:- ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಾನು ನಿಯೋಜಿತವಾಗಿರುವ ಕೆಲಸವನ್ನು ಬಿಟ್ಟು ಸಮಾಜವನ್ನು ಒಡೆಯುವ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ.ರಂಗಾಯಣದ ನಿರ್ದೇಶಕನಾಗಿ ಮುಂದುವರಿಯಲು ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಸಮಾಜದ ಐಕ್ಯತೆ ಮತ್ತು ಭಾವೈಕ್ಯತೆಗೆ ವಿರುದ್ಧವಾಗಿ ವರ್ತಿಸುತ್ತಿರುವ ಇವರು ತಕ್ಷಣ ಸರ್ಕಾರದ ಭಾಗವಾಗಿರುವ ರಂಗಾಯಣಕ್ಕೆ ರಾಜೀನಾಮೆ ನೀಡಬೇಕು.ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವ ಈತನನ್ನು ವಜಾಗೊಳಿಸಬೇಕೆಂದು ಕರ್ನಾಟಕ ಸಂಘದ ಅಧ್ಯಕ್ಷ ಪೆÇ್ರ.ಬಿ.ಜಯಪ್ರಕಾಶಗೌಡ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆದಿಚುಂಚನಗಿರಿಯ ಮಹಾಸ್ವಾಮೀಜಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಬಗ್ಗೆ ಅತ್ಯಂತ ಕೇವಲವಾಗಿ ಮಾತನಾಡಿದ್ದಾರೆ. ಶ್ರೀ ಕ್ಷೇತ್ರವು ಒಕ್ಕಲಿಗರಿಗೆ ಸೀಮಿತವಾದ ಮಠವಲ್ಲ ಎಂಬ ಕನಿಷ್ಠ ತಿಳುವಳಿಕೆ ಇಲ್ಲದೆ ಅರ್ಥಹೀನವಾಗಿ ಬಡ ಬಡಿಸಿದ್ದಾರೆ. ಸ್ವಾಮೀಜಿಯವರನ್ನು ಒಂದು ಜಾತಿಗೆ ಮೀಸಲಿರಿಸಿ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೆಯ
ಸ್ವಾಮೀಜಿ ಅಂಥವರನ್ನು ಒಕ್ಕಲಿಗರಿಗೆ ಮಿತಿಗೊಳಿಸಿ ಹಿಂದೂ ಧರ್ಮಕ್ಕೂ ಅಪಚಾರವೆಸಗಿದ್ದಾರೆ ಎಂದು ದೂರಿದರು.
ರಂಗಭೂಮಿಗೆ ಶಕ್ತಿ ತುಂಬ ಬೇಕಾದ ಈ ವ್ಯಕ್ತಿ ಉದಯ ಸ್ಥಾನಮಾನ ಮರೆತು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಈ ಕೆಲಸ ಮುಖ್ಯ ಎನ್ನುವುದಾದರೆ ಇರುವ ಹುದ್ದೆಗೆ ರಾಜೀನಾಮೆ ನೀಡಿ ವಿಧಾನಸೌಧದಲ್ಲಿ ಬಾಯಿ ಬಡೆದುಕೊಳ್ಳಲಿ. ಅದು ಬಿಟ್ಟು ಈ ರೀತಿ ಕ್ಷುಲ್ಲಕವಾಗಿ ಮಾತನಾಡುವುದು ರಂಗಾಯಣಕ್ಕಾಗಲಿ ಒಟ್ಟಾರೆ ರಂಗಭೂಮಿಗಾಗಲಿ ಶೋಭೆ ತರುವುದಿಲ್ಲ ಎಂದರು.
ತನ್ನದೇ ನಾಟಕವನ್ನು ಸರ್ಕಾರದ ಅನುದಾನದಲ್ಲಿ ಪ್ರಯೋಗ ಮಾಡುವುದು ಎಷ್ಟು ಔಚಿತ್ಯ ಪೂರ್ಣವಾಗಿದೆ. ಬೇರೆಯವರ ಸಾಹಿತ್ಯ ಕೃಷಿಯನ್ನು ಪಕ್ಕಕ್ಕೆ ತಳ್ಳಿ ತನ್ನದೇ ಕಪೆÇೀಲ ಕಲ್ಪಿತ ನಾಟಕವನ್ನು ಸಾರ್ವಜನಿಕ ಹಣವನ್ನು ಬಳಸಿ ಪ್ರದರ್ಶಿಸಿರುವುದನ್ನು ಪ್ರಜ್ಞಾವಂತರೆಲ್ಲ ಪ್ರಶ್ನಿಸ ಬೇಕಿದೆ ಎಂದರು.
ಉರಿಗೌಡ,ನಂಜೇಗೌಡನ ಹೆಸರುಗಳನ್ನು ಮುಂದು ಮಾಡಿ ಸಾಮಾಜಿಕ ತಲ್ಲಣಗಳನ್ನು ಸೃಷ್ಟಿಸಿದ ವ್ಯಕ್ತಿ ಈತ. ಎರಡು ಹೆಸರುಗಳನ್ನು ಜಾನಪದ ಲಾವಣಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಒಂದು ಮಾಡಿ ಒಕ್ಕಲಿಗ ಸಮುದಾಯಕ್ಕೆ ಅಪಚಾರ ಮಾಡಲು ಯತ್ನಿಸಿದ ಅಡ್ಡಂಡ ಸಿ.ಕಾರ್ಯಪ್ಪನನ್ನು ರಂಗಾಯಣದಿಂದ ವಜಾಗೊಳಿಸಿ ಸಾಮಾಜಿಕ ಶಾಂತಿಯನ್ನು ಕಾಪಾಡಲು ಸರ್ಕಾರ ಮುಂದಾಗಲಿ ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಪಿ.ಲೋಕೇಶ್ ಚಂದಗಾಲು, ಎಚ್.ಡಿ.ಸೋಮಶೇಖರ್,ಕಾರ್ಯಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಂ.ಕೆ.ಹರೀಶ್ ಕುಮಾರ್, ವಿಶ್ರಾಂತ ಪ್ರಾಂಶುಪಾಲರಾದ ಡಾ. ಅನಿಲ್ ಕುಮಾರ್, ಡಾ. ಎಸ್.ಬಿ. ಶಂಕರಗೌಡ, ಸಮರ್ಥನ ಮಹಿಳಾ ವೇದಿಕೆ ಅಧ್ಯಕ್ಷೆ ನಾಗರೇವಕ್ಕ, ನಿವೃತ್ತ ಉಪನ್ಯಾಸಕ ಉದಯ್ ಕುಮಾರ್ ಹಾಜರಿದ್ದರು.