ರಂಗಾಯಣ ಕಚೇರಿಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ಕಲಬುರಗಿ.ಜೂ.5:ಕಲಬುರಗಿ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿ ಆವರಣದಲ್ಲಿ ಶನಿವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅಚರಿಸಲಾಯಿತು.

ಈ ಸಂದರ್ಭದಲ್ಲಿ ಕಲಬುರಗಿ ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ರಂಗಾಯಣ ಪ್ರಭಾರಿ ಆಡಳಿತಾಧಿಕಾರಿಗಳಾದ ದತ್ತಪ್ಪ ಸಾಗನೂರ, ಬೆಂಗಳೂರಿನ ಲಲಿತಕಲಾ ಅಕಾಡೆಮಿ ಸದಸ್ಯ ಹಣಮಂತ ಮಂತಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾಬುರಾವ ಕೋಬಾಳ, ಹಿರಿಯ ಸಂಗೀತಗಾರ ಶಂಕರ್ ದೇಸಾಯಿ ಕಲ್ಲೂರ ಹಾಗೂ ಇಲಾಖೆಯ ಸಿಬ್ಬಂದಿ ಮತ್ತು ರಂಗಾಯಣದ ಕಲಾವಿದರಾದ ಅಕ್ಷತಾ ಕುಲಕರ್ಣಿ ಪಾಲ್ಗೊಂಡಿದ್ದರು.