ರಂಗಾಯಣದಲ್ಲಿ ಮೂಕಾಭಿನಯ ಶಿಬಿರ ಸಂಪನ್ನ

ಕಲಬುರಗಿ : ನ.25:ಮೌನವಾಗಿಯೇ ಸಾಮಾಜಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಮೂಕಾಭಿನಯ ಉತ್ತಮ ಮಾರ್ಗ ಎಂದು ಚಿತ್ತಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮಲ್ಲಪ್ಪ ಮಾನೆಗರ ಹೇಳಿದರು.
ರಂಗಾಯಣದಲ್ಲಿ ಹಮ್ಮಿಕೊಂಡಿದ್ದ ಒಂದು ವಾರದ ಮೂಕಾಭಿನಯ ತರಬೇತಿ ಶಿಬಿರ ಸಮಾರೋಪ ಸಮಾರಂಭದ ಅತಿಥಿಯಾಗಿ ಮಾತನಾಡಿದ ಅವರು, ರಂಗಾಯಣದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿ ರಂಗಪ್ರಯೋಗದ ವಸ್ತುವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಕೆ. ಎಚ್.ಚೆನ್ನೂರ್ ಅತಿಥಿಗಳಾಗಿದ್ದರು. ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಪ್ರಾಸ್ತಾವಿಕ ಮಾತನಾಡಿದರು. ಶಿಬಿರ ನಿರ್ದೇಶಕ ಮುರುಗೇಂದ್ರ ನಾಚವಾರ ಅನಿಸಿಕೆ ವ್ಯಕ್ತಪಡಿಸಿದರು. ಡಾ.ಸಂದೀಪ ನಿರೂಪಿಸಿದರು. ನಂತರ ಶೈಲೇಶಕುಮಾರ್ ತರಬೇತಿ ನೀಡಿದ ಕರಾಟೆ ಪ್ರದರ್ಶನ ಜರುಗಿತು.
ಪೆÇ್ರ. ಅನೀಲ ಕುಮಾರ್ ಚಿತ್ತಾಪುರ, ಕಲ್ಯಾಣಿ ಬಜಂತ್ರಿ, ಇತರರು ಭಾಗವಹಿಸಿದ್ದರು.