ರಂಗಾಂತರಾಳ ಕಾರ್ಯಕ್ರಮ

ಕಲಬುರಗಿ.ಜು.15:ಕಲಬುರಗಿ ರಂಗಾಯಣ ವತಿಯಿಂದ ರಂಗಾಂತರಾಳ (ರಂಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹಿರಿಯರ ಮನದಾಳದ ಮಾತುಗಳು) ಕಾರ್ಯಕ್ರಮವನ್ನು ಇದೇ ಜುಲೈ 16 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ರಂಗಾಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

  ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ರಂಗ ಕಲಾವಿದರಾದ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳುವರು.