ರಂಗಸ್ಥಳ ಶೀರ್ಷಿಕೆ ಬಿಡುಗಡೆ

ಯುವ ಪ್ರತಿಭೆಗಳ ‘ರಂಗಸ್ಥಳ ‘ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಚಿತ್ರದ ಮೂಲಕ ಮಲೆಯಾಳಂ ನಟ ಮನೋಜ್. ಕೆ .ಜಯನ್ ಕನ್ನಡಕ್ಕೆ ಬಂದಿದ್ದಾರೆ.

ನಿರ್ಮಾಪಕ ಡಾ. ರೇವಣ್ಣ ಮಾತನಾಡಿ ,ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ನಮ್ಮಿಂದ 150 ಕುಟುಂಬಗಳಿಗೆ ಅನುಕೂಲವಾದರೆ ಸಾಕು ,ಲಾಭ ಬೇಡ ಹಾಕಿದ ಹಣ ಬಂದರೆ ಸಾಕು. ಸಂಸ್ಥೆಯಿಂದ ಹೊಸಬರಿಗೆ ಮುಂದೆಯೂ ಅವಕಾಶ ಕೊಡುವ ಉದ್ದೇಶವಿದೆ. ವಾಲಿಬಾಲ್‍ಗೆ ಸಂಬಂಧಿಸಿದ ಚಿತ್ರ ನಿರ್ಮಿಸುವ ಆಸೆ ಇದೆ ಎಂದರು.

ನಿರ್ದೇಶಕ ಈಶ್ವರ್ ನಿತಿನ್ ಮಾತನಾಡಿ ಗ್ರಾಮೀಣ ಸೊಗಡಿನ  ಕಥೆ, ಪುತ್ತೂರು,ಸುಳ್ಯ ಭಾಗದ ಭಾಷೆ ,ಸೊಗಡು,ಆಚಾರ , ವಿಚಾರ, ಕಲೆ, ಬದುಕಿನ ಸುತ್ತ ನೈಜಕ್ಕೆ ಪೂರಕ ಎನ್ನುವ ಕಥೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪಾತ್ರಧಾರಿಗಳ ಒಂದೊಂದು ರೀತಿಯ ಮನಸ್ಥಿತಿ.ಹೇಗೆ,ಯಾವ ರೀತಿ ಏನೆಲ್ಲಾ ತೊಂದರೆ ನೀಡುತ್ತದೆ.ರಂಗಮಂಟಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ .ಬಹಳಷ್ಟು ಹೊಸಬರು ಹಾಗೂ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದು , ಈಗಾಗಲೇ 25 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದರು.

ನಾಯಕ ವಿಲೋಕ್ ರಾಜ್ ಮಾತನಾಡಿ ಚಿತ್ರ ಜೀವನಕ್ಕೆ ಒಂದು ತಿರುವು ನೀಡುವ ಸಿನಿಮಾ ಆಗಲಿದೆ. ಯಕ್ಷಗಾನ ಕಲಾವಿದನಾಗಿ ಅಭಿನಯಿಸುತ್ತಿದ್ದು , ಇದಕ್ಕಾಗಿ ಮೂರು ತಿಂಗಳ ತರಬೇತಿ ಪಡೆದಿದ್ದೇನೆ. ಹೊಸ ಪ್ರತಿಭೆಗಳನ್ನು ಪೆÇ್ರೀತ್ಸಾಹಿಸಿ ಎಂದರೆ ನಾಯಕಿ ಶಿಲ್ಪ ಕಾಮತ್ ಮಾತನಾಡಿ ವನ್ಯಜೀನಿ ಛಾಯಾಚಿತ್ರಕಾರರ ಪಾತ್ರ ಮಾಡುತ್ತಿದ್ದೇನೆ ಎಂದರು.

ನಟ ಮನೋಜ್. ಕೆ .ಜಯನ್  ಮಾತನಾಡಿ ಉಗ್ರ ನರಸಿಂಹ ಚಿತ್ರದಲ್ಲಿ ಅಭಿನಯಿಸಿದ್ದೆ 18 ವರ್ಷಗಳ ನಂತರ ಮತ್ತೊಮ್ಮೆ ರಂಗಸ್ಥಳ ಮೂಲಕ  ವಿಲನ್ ಪಾತ್ರದಲ್ಲಿ ಕಾಡಿಸಿಕೊಂಡಿದ್ದೇನೆ.  ಕನ್ನಡ ಭಾಷೆಗೆ ದೈವಿಕ ಶಕ್ತಿ ಇದೆ. ಡಾ. ರಾಜ್ ಕುಮಾರ್ ಅಭಿಮಾನಿ. ಅವರು ತಮ್ಮ ಚಿತ್ರಗಳಲ್ಲಿ ತಾವೇ ಹಾಡುತ್ತಾ ಅಭಿನಯಿಸುತ್ತಿದ್ದು ನನಗೆ ಬಹಳ ಸಂತೋಷವಾಗುತ್ತಿತ್ತು ಎಂದರು. ಚಿತ್ರಕ್ಕೆ ಎನಾಷ್ ಒಲಿವೇರ ಛಾಯಾಗ್ರಹಣ ,ಜೂಡೋ ಸ್ಯಾಂಡಿ  ಸಂಗೀತವಿದೆ.