ರಂಗಸಮುದ್ರದ ಕೈಲಾಸ ಹಾಡು ಬಿಡುಗಡೆ

ರಂಗಸಮುದ್ರ ಚಿತ್ರದ  ಹಾಡನ್ನು  ನಾಗ ಸಾಧು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಪವಿತ್ರ ಕ್ಷೇತ್ರ “ಕಾಶಿ”ಗೆ ತೆರಳಿದ ಚಿತ್ರತಂಡ  ನಾಗಸಾಧುಗಳ ಬಳಿ ಹಾಡು ಬಿಡುಗಡೆ ಮಾಡಿಸಿರುವುದು ವಿಶೇಷ. ಕೈಲಾಶ್ ಕೇರ್  ಹಾಡಿದ್ದಾರೆ.ರಂಗಾಯಣ ರಘು ವಿಭಿನ್ನ ಹಾಗು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಡಿಗೆ ಬೇಕಾದ ಸ್ಥಳ ಹಾಗು ಹೊಂದಿಕೊಳ್ಳುವ ಜನ ಬೇಕಿತ್ತು, ಹಾಗಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಿಜಯಂತಿ ಊರು ಆಯ್ಕೆ ಮಾಡಿಕೊಂಡು ಅಲ್ಲಿನ ಮಾಳಿಂಗರಾಯ ಸ್ವಾಮಿ ಜಾತ್ರೆಗೆ ಸರಿಸುಮಾರು 15 ಲಕ್ಷ ಜನರು ಸೇರುತ್ತಾರೆ.ಅದಕ್ಕಾಗಿ  4 ತಿಂಗಳು ಕಾಯ್ದು  ಜನರ ಮದ್ಯೆ ಚಿತ್ರೀಕರಿಸಿದ್ದೇವೆ  ಎಂದರು ನಿರ್ದೇಶಕ ರಾಜಕುಮಾರ್  ಅಸ್ಕಿ.

 ನಿನ್ನ ಕನಸಿನಂತೆ ಚಿತ್ರೀಕರಿಸು ಯಾವುದಕ್ಕೂ ಕಾಂಪ್ರಮೈಸ್ ಆಗುವುದು ಬೇಡಾ ಎಂದು ನಿರ್ಮಾಪಕರು ಹೇಳಿದ ಮಾತು ಚಿತ್ರವನ್ನು ವಿಬಿನ್ನವಾಗಿ ತೆರೆಗೆ ಕಟ್ಟಿಕೊಡಲು ಸಾದ್ಯವಾಗಿದೆ ಎಂದಿದ್ದಾರೆ.

ಹೊಯ್ಸಳ ಕೊಣನೂರು  ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.5 ಹಾಡುಗಳಿದ್ದು ಕೈಲಾಶ್ ಕೇರ್,  ಎಮ್ ಎಮ್ ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ.ದೇಸಿಮೋಹನ್  ಸಂಗೀತ , ಆರ್.ಗಿರಿ  ಛಾಯಾಗ್ರಾಹಣ ಚಿತ್ರಕ್ಕಿದೆ.

ರಂಗಾಯಣರಘು, ಸಂಪತ್ ರಾಜ್, ಕೆವಿಆರ್, ದಿವ್ಯಾಗೌಡ, ಮೋಹನ್ ಜುನೇಜಾ, ಗುರುರಾಜ್ ಹೊಸಕೋಟೆ, ಮಿಮಿಕ್ರಿ ಗೋಪಿ, ಉಗ್ರಂ ಮಂಜು, ಸದಾನಂದ, ಮೂಗ್ ಸುರೇಶ್, ಶಂಕರ್ ದಾಸ್ ಬಳ್ಳಾರಿ,  ಮಹೇಂದ್ರ, ಸ್ಕಂದ ತೇಜಸ್  ಮುಂತಾದವರಿದ್ದಾರೆ.