ರಂಗಸಮುದ್ರ’ಕ್ಕೆ ಕುಂಬಳಕಾಯಿ

ಕೆ ಆರ್ ಹೊಯ್ಸಳ ನಿರ್ಮಿಸುತ್ತಿರುವ `ರಂಗಸಮುದ್ರ’ ಚಿತ್ರೀಕರಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕುಂಬಳಕಾಯಿ ಒಡೆದಿದೆ. ಶೇ.85ರಷ್ಟು ಚಿತ್ರೀಕರಣ ರಾಜ್ಯದ ವಿವಿದೆಡೆಗಳಲ್ಲಿ ನಡೆದಿದೆ. ನಿರ್ದೇಶಕ ರಾಜಕುಮಾರ್ ಅಸ್ಕಿ ನಿರ್ದೇಶನವಿದೆ.

ಪುನೀತ್ ರಾಜ್ ಕುಮಾರ್ ನಟಿಸಬೇಕಾಗಿದ್ದ  ಪ್ರಮುಖ ಪಾತ್ರದಲ್ಲಿ ಮತ್ತೊಬ್ಬ ನಟ ನಟಿಸಿದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ರಂಗಾಯಣ ರಘು, ಸಂಪತ್ ರಾಜ್,ಕರಾವಳಿಯ ಕೆವಿಆರ್ ಮತ್ತು ದಿವ್ಯಾ ಗೌಡ, ಗುರುರಾಜ್ ಹೊಸಕೋಟೆ ಮೋಹನ್ ಜುನೇಜ, ಮೂಗು ಸುರೇಶ್, ಉಗ್ರಂ ಮಂಜು, ಸ್ಕಂದ ತೇಜಸ್,   ಡ್ರಾಮಾ ಜ್ಯೂನಿಯರ್ ಮಹೇಂದ್ರ ಮತ್ತಿತರರು ಚಿತ್ರದ ಭೂಮಿಕೆಯಲ್ಲಿದ್ದಾರೆ.

ಚಿತ್ರಕ್ಕೆ ದೇಸೀ ಮೋಹನ್ ಸಂಗೀತ. ಸಂಕಲನ ಶ್ರೀಕಾಂತ್, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯವಿದೆ.ಗಾಯಕರಾದ ಕೈಲಾಶ್ ಖೇರ್,  ಕೀರವಾಣಿ, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಕೆ ಆರ್ ಹೊಯ್ಸಳ ತಿಳಿಸಿದ್ದಾರೆ.