ರಂಗಮಂದಿರ ಉದ್ಘಾಟನೆ

ಗದಗ,ಜೂ21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಎದುರಿನ ಪರಿಸರ ಲೇಔಟ್‍ನಲ್ಲಿ ನಿರ್ಮಿಸಿದ ಭಾರತರತ್ನ ಪಂಡಿತ ಭೀಮಸೇನ್ ಜೋಶಿ ರಂಗಮಂದಿರವು ಸೋಮವಾರ ಸಂಜೆ ಲೋಕಾರ್ಪಣೆಗೊಳಿಸಲಾಯಿತು.
ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಜಿಲ್ಲಾ ರಂಗಮಂದಿರ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಲು ಸಹಕರಿಸಿದ ಹಾಗೂ ಕಾರ್ಯನಿರ್ವಹಿಸಿದ ಅಧಿಕಾರಿಗಳು ಮತ್ತು ತಾಂತ್ರಿಕ ವರ್ಗದವರನ್ನು ಇದೇ ವೇಳೆ ಸನ್ಮಾನಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಶಿರೋಳ, ಎನ್.ಐ.ಸಿ. ಇಂಜನೀಯರುಗಳಾದ ಶರಣಪ್ಪ ಗಡ್ಡದ, ವಿಜಯ ಯಲಮಳ್ಳಿ, ಶ್ರೀಕಾಂತ, ಸೌಂಡ ಇಂಜನೀಯರ್ ದಿನೇಶ, ಇಂಟೀರಿಯರ್ ಡೆಕಾರೇಟರ್ ಮೊಹಮ್ಮದ್ ನಿಜಾಮ, ಲೈಟಿಂಗ್ ಟೆಕ್ನಿಷಿಯನ್ ಪ್ರಸನ್ನ ಮಾಳೆಕೊಪ್ಪಮಠ, ಎಲೆಕ್ಟ್ರಿಷಿಯನ್ ವಿಶ್ವ ಅಸುಂಡಿ, ಕಲಾವಿದರಾದ ರಾಜು ಶಿಶ್ವಿನಹಳ್ಳಿ, ಫಕೀರೇಶ, ಬಡಿಗೇರ ಸೇರಿದಂತೆ ಗಿರೀಶ ಓದುನವರ, ಅರವಿಂದ ಹುಯಿಲಗೋಳ, ಸುಶಿಲೇಂದ್ರ ಜೋಶಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಹಿಂದುಸ್ಥಾನಿ ಗಾಯಕ ಪದ್ಮಶ್ರೀ ಪಂಡಿತ ವೆಂಕಟೇಶ ಕುಮಾರ್, ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ, ಕನ್ನಡ ಸಂಸ್ಕøತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ, ಜಂಟಿ ನಿರ್ದೇಶಕ ಬಸವರಾಜ ಹೂಗಾರ , ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಸೇರಿದಂತೆ ಜನಪ್ರತಿನಿಧಿಗಳು , ಅಧಿಕಾರಿಗಳು ಉಪಸ್ಥಿತರಿದ್ದರು.