
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಿನ್ನೆ
ಸಂಜೆ ನಗರದ ರಾಘವ ಕಲಾಮಂದಿರದಲ್ಲಿ. ರಾಘವ ಮೆಮೋರಿಯಲ್ ಅಸೋಸಿಯೇಷನ್ ನಿಂದ ಹಮ್ಮಿಕೊಂಡಿದ್ದ ಡಾ.ಜೋಳದರಾಶಿ ದೊಡ್ಡನಗೌಡರ 28ನೇ ವಾರ್ಷಿಕ ಪುಣ್ಯ ತಿಥಿ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಗೌಡರ ಕುಟುಂಬದವರು ಉದ್ಘಾಟಿಸಿದರು.
ಸಂಸ್ಥೆಯ ಕಾರ್ಯಕಾರಿಣಿ ಸದಸ್ಯ ಎನ್.ಬಸವರಾಜ್ ಮಾತನಾಡಿ, ರಂಗಭೂಮಿ, ಸಾಹಿತ್ಯ, ಹಾಗೂ ಗಮಕ ಕಲೆಗೆ ಜೋಳದರಾಶಿ ದೊಡ್ಡನಗೌಡರು ಮೆರುಗು ತಂದವರೆಂದರು.1910 ರ ಜುಲೈ27 ರಂದು ಜೋಳದರಾಶಿ ಯಲ್ಲಿ ಜನಿಸಿದರು.ತಾಯಿ ರುದ್ರಮ್ಮ,ತಂದೆ ಪಂಪನಗೌಡರು.ಗೌಡರು ಓದಿದ್ದು 4ನೇ ತರಗತಿ ಅದರೆ ಅವರು ರಂಗಭೂಮಿ ಮತ್ತು ಸಾಹಿತ್ಯದಲ್ಲಿ ದೊಡ್ಡ ಸಾದನೆಗೈದರು.ಜೋಳದರಾಶಿ ಯಲ್ಲಿ ಅಯ್ಯನವರ ಶಾಲೆ ಅಥವಾ ಗುಡಿ ಬಡಿಯಲ್ಲಿ ಓದಿದರು.ಅಷ್ಟೇ.ಆದರೆ ಅವರು ನಲವತ್ತು ಪುಸ್ತಕ ಬರೆದಿದ್ದಾರೆ, ಬಾಲ್ಯದಿಂದಲೂ ಬಯಲಾಟ, ನಾಟಕ, ಗಳಲ್ಲಿ ಅಭಿನಯಿಸುತ್ತ , ಗಮಕ ಕಲೆ ಯಲ್ಲಿ ಸಾಧನೆ ಮಾಡಿ ಗಮಕ ಕಲಾನಿಧಿ ಎಂದು ಖ್ಯಾತ ರಾದರು.ನಾಟಕರಂಗದಲ್ಲಿ ಬಳ್ಳಾರಿ ರಾಘವರ ಶಿಷ್ಯರಾಗಿ ಉತ್ತಮ ನಟರಾಗಿ ರಂಗಭೂಮಿ ಗೆ ಸೇವೆ ಗೈದರು.,1994 ರ ಮೇ 10 ರಂದು ಶರೀರವನ್ನು ತ್ಯಜಿಸಿ ಶಿವೈಕ್ಯರಾದರು.ಶರಣಸಾಹಿತ್ಯಕ್ಕೆಅಪಾರ ಕೊಡುಗೆ ನೀಡಿದ್ದಾರೆ.ಸರ್ಕಾರದ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಗಳು ಲಭಿಸಿದವು ಹೀಗೆ ಬಹುಮುಖ ಪ್ರತಿಭೆಯ ಮತ್ತು ನಾಟಕ ಕಲಾರಂಗಕ್ಕೆ ಅವರಿತ್ತ ಕೊಡುಗೆ ಅಪಾರವಾಗಿದೆ ಎಂದರು.
ಅಸೋಸಿಯೇಷನ್ ಅಧ್ಯಕ್ಷ ಕೆ.ಕೋಟೇಶ್ವರ ರಾವ್, ಗೌರವಾಧ್ಯಕ್ಷ ಕೆ. ಚನ್ನಪ್ಪ ಅವರು ಗೌಡರ ಸಾದನೆಗಳನ್ನು ಸ್ಮರಿಸಿದರು.
ಎರ್ರಿಸ್ವಾಮಿ ಗೌಡರಿಂದ ಪ್ರಾರ್ಥನೆ ಮಾಡಿದರೆ,
ವಂದನಾರ್ಪಣೆಯನ್ನು ಸಹ ಕಾರ್ಯದರ್ಶಿ ಎಂ.ರಾಮಾಂಜನೇಯುಲು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಾದ ಹೆಚ್ ವಿಷ್ಣುವರ್ಧನ್ ರೆಡ್ಡಿ,ಕೆ.ರಾಮಾಂಜನೇಯಲು, ಕೆ ಕೃಷ್ಣ,ಟಿ.ಜಿ.ವಿಠಲ್,ಜಿ ಪ್ರಭಾಕರ,ಗಾದೆಂ,ಕೆ ಶ್ಯಾಮ ಸುಂದರ್,ಕೆ ಪೊಂಪನ ಗೌಡ, ಕಪ್ಪಗಲ್ಲು ಪ್ರಭುದೇವ,ಜಿ ಆರ್ ವೆಂಕಟೇಶಲು, ರಮಣಪ್ಪ ಭಜಂತ್ರಿ ಮತ್ತು ಗೌಡರ ಕುಟುಂಬದವರು,ಕಲಾವಿದರು ಭಾಗವಹಿಸಿದ್ದರು.
ನಂತರ ರಂಗ ಸಂಚಲನ ಕಲಾ ವೇದಿಕೆಯಿಂದ ಕವಿತಾಕೃಷ್ಣ, ರಚನೆಯಲ್ಲಿ , ಜೆ ವೆಂಕೋಬಾ ಚಾರ್ ನಿರ್ದೇಶನದಲ್ಲಿ, ನೇತಿ ರಘುರಾಂ ರಂಗ ನಿರ್ವಹಣೆಯಲ್ಲಿ ಏಕಲವ್ಯ ಕನ್ನಡ ಪೌರಾಣಿಕ ನಾಟಕ ಪ್ರದರ್ಶನ ಗೊಂಡು ಪ್ರೇಕ್ಷಕರ ಮನ ಸೂರೆ ಗೊಂಡಿತು.