ರಂಗಭೂಮಿ ನಮ್ಮೆಲ್ಲರ ಆತ್ಮ ಬಲ:  ಪ್ರೊ.ಜೆ.ತಿಪ್ಪೆರುದ್ರಪ್ಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.11: ರಂಗಭೂಮಿ ಹಲವಾರು ಆಯಾಮಗಳ ಸಂಗಮ ಶ್ರವ್ಯ ಹಾಗೂ ದೃಶ್ಯ ಮಾಧ್ಯಮ ಅಂತಹ ಮಾಧ್ಯಮ ನಮ್ಮೆಲ್ಲರ ಆತ್ಮ ಬಲ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೆ.ತಿಪ್ಪೆರುದ್ರಪ್ಪ ನುಡಿದರು
ಅವರು ನಿನ್ನೆ ಸಂಜೆ ನಗರದ ರಂಗ ಜಂಗಮ ಸಂಸ್ಥೆ,  ಗಾಯತ್ರಿ ಪ್ರಕಾಶನವು ಹಮ್ಮಿಕೊಂಡಿದ್ದ ಪ್ರೊ.ರಾಮಕೃಷ್ಣಯ್ಯನವರ ನಿರ್ದೇಶನದ ನಾಟಕಗಳ ಅವಲೋಕನ ಕೈದಿವಿಗೆ ಹಾಗೂ ವಾಲ್ಮೀಕಿ ಮತ್ತು ಇತರೆ ನಾಟಕಗಳು ಪುಸ್ತಕಗಳ ಲೋಕಾರ್ಪಣ ಕಾರ್ಯಕ್ರಮವನ್ನು ಡಿ ಆರ್ ಕೆ ರಂಗಸಿರಿಯ ಬೀಚಿ ಸಭಾಂಗಣದಲ್ಲಿ  ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಥೆ ಕಾದಂಬರಿ ಕಾವ್ಯಗಳು ಮನುಷ್ಯನ ಓದಿಸುವ ಮತ್ತು ಅದನ್ನ ಸೃಷ್ಟಿಸುವ ಕ್ರಿಯೆಗಳನ್ನಾಗಿ ರೂಪಿಸುತ್ತವೆ ಆದರೆ ಆ ನಾಟಕಗಳು ಸೃಜನಶೀಲವಾಗಿ ಬದುಕನ್ನ ಕಟ್ಟಿಕೊಡುತ್ತವೆ ಎಂದು ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶಾಮ್ ಮೂರ್ತಿ  ಹೇಳಿದರು
 ರಂಗಭೂಮಿ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮಹತ್ವಪೂರ್ಣವಾದದ್ದು ರಂಗ ಕೃತಿಗಳು ಸಮಕಾಲಿನ ವಸ್ತು ವಿಷಯಗಳೊಂದಿಗೆ ರಚನೆಗೊಂಡಾಗ ಅವುಗಳ ಮಹತ್ವ ತುಂಬಾ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂಬುದಾಗಿ  ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥ ಪ್ರೊ.ರಾಮಕೃಷ್ಣಯ್ಯ  ಹೇಳಿದರು
ಗಾಯತ್ರಿ ಪ್ರಕಾಶನದ ಡಾ. ಬಸಪ್ಪ ಕಟ್ಟಿಮನಿ ಅವರು ಡಾ.ಅಂಬರೀಶ್ ಸಾರಂಗಿ ಮತ್ತು ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರ ಸಂಪಾದಕತ್ವದ ಪ್ರೊ.ರಾಮಕೃಷ್ಣಯ್ಯ ನವರ ನಿರ್ದೇಶನದ ನಾಟಕಗಳ ಅವಲೋಕನ ಕೈದಿವಿಗೆ ಪುಸ್ತಕದ ಕುರಿತು  ಮಾತನಾಡಿದರು.
ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಸಂಪಾದಕತ್ವದ ವಾಲ್ಮೀಕಿ ಮತ್ತು ಇತರೆ ನಾಟಕಗಳನ್ನು ಕುರಿತು ಡಾ. ದಸ್ತಗೀರ್ ಸಾಬ್ ದಿನ್ನಿ ಯವರು ನಾಟಕಗಳನ್ನ ಕಟ್ಟುವ ಅಥವಾ ರಚಿಸುವ ಕೆಲಸ ತುಂಬಾ ಮಹತ್ವಪೂರ್ಣವಾದ್ದೆಂದರು.
ಪುಸ್ತಕಗಳ ದಾಖಲೀಕರಣ ಮಾಡಬೇಕು ಎನ್ನುವುದು ಬಹುದೊಡ್ಡ ಸವಾಲು ಇದನ್ನು ಎದುರಿಸಲು ಕೆಲವರಿಗೆ ಮಾತ್ರ ಸಾಧ್ಯ ಹೊಸ ನಾಟಕಗಳ ಅಲೆಯು ಪ್ರಾರಂಭವಾಗಲು ಇಂತಹ ನಾಟಕಕಾರರು ಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕರು ವೀರಶೈವ ವಿದ್ಯಾ ವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ ಚೋರುನೂರು ಕೊಟ್ರಪ್ಪ  ಹೇಳಿದರು
ನಂತರ ವಚನ ಗಾಯನವನ್ನು ಪಂಡಿತ ರಾಘವೇಂದ್ರ ಗುಡದೂರು ಮತ್ತು ತಂಡದವರು ತಬಲ ಸಾತಿಯಲ್ಲಿ ಶ್ರೀ ಕೆ ಉಮೇಶ್ ಆಕಾಶವಾಣಿ ಕಲಾವಿದರು ಸಂಡೂರು ಇವರು ನೆರವೇರಿಸಿಕೊಟ್ಟರು
ಪ್ರಾರ್ಥನೆ ಉಮೇಶ ಸ್ವಾಗತಪ್ರಸ್ತವಿಕ ನುಡಿ ಅಣ್ಣಾಜಿ ಕೃಷ್ಣರೆಡ್ಡಿ ಹಾಗೂ ವಂದನಾರ್ಪಣೆ ನೀತಿ ರಘುರಾಮ ನಿರೂಪಣೆ ವಿಷ್ಣು ಹಡಪದ ನೆರವೇರಿಸಿಕೊಟ್ಟರು ಕಾರ್ಯಕ್ರಮದಲ್ಲಿ ಕಲಾವಿದರು ಜಗದೀಶ್ ಕೆ. ವೆಂಕೋಬಚಾರಿ ವಿಜಯಿಂದ್ರ ಮುಂತಾದವರಿದ್ದರು.