ರಂಗಭೂಮಿ ದಿನಾಚರಣೆ ‘ರಂಗಕಲೆಯ ಉಳಿವಿಗಾಗಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಹೊಸಪೇಟೆ ಮಾ28: ರಂಗಕಲೆ ಇಂದು ಕಾಣದ ಸ್ಥಿತಿಗೆ ನಿಂತಿದ್ದು ಕಲೆಯ ಉಳಿವಿಗಾಗಿ ಕಲೆ ಹಾಗೂ ಕಲಾವಿಧರಿಗೆ ಪ್ರೋತ್ಸಾಹಿಸಬೇಕಾಗಿರುವುದು ಅನಿವಾರ್ಯವಾಗಿದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎನ್.ಎಸ್.ರೇವಣಸಿದ್ಧಪ್ಪ ಹೇಳಿದರು.
ನಗರದ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಶನಿವಾರ ರಾತ್ರಿ ಕರ್ನಾಟಕ ನಾಟಕ ಅಕೆಡಾಮಿ, ಕನ್ನಡ ಕಲಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಂಗಭೂಮಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಮುಂದಿನ ಜನಾಂಗ ರಂಗಕಲೆಯನ್ನೇ ಮರೆಯುತ್ತಿದ್ದು ಇದು ಸಮಾಜದ ನೋವು-ನಲಿವುಗಳನ್ನು ಹೇಳುವ ಹಾಗೂ ಆಮೂಲಕ ಸಮಾಜವನ್ನು ತಿದ್ದುವ ಕಾಯಕ ಮರೆಯಾಗುವಂತೆ ಮಾಡುತ್ತೀದೆ. ಈ ಹಿನ್ನೆಲೆಯಲ್ಲಿ ನಾವು ಕಲೆ ಉಳಿವೆ ಶ್ರಮಿಸಬೇಕು ನೂತನ ವಿಜಯನಗರ ಜಿಲ್ಲಾ ರಚನೆಯ ಈ ಸಂದರ್ಭದಲ್ಲಿ ಸುಸಚ್ಚಿತ ರಂಗಮಂದಿರವೂ ನಿರ್ಮಾಣವಾಗಲು ಸಚಿವರನ್ನು ಒತ್ತಾಯಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತಿ ಸಂಶೋಧಕ ಡಾ.ಕೃಷ್ಣ ಕೋಲ್ಹಾರ್ ಕುಲಕರ್ಣಿ ಮಾತನಾಡಿ ರಂಗಚಟುವಟಿಕೆಗಳು ಜೀವಂತವಾಗಿ ಉಳಿಯಲು ರಂಗಾಶಕ್ತಿಯನ್ನು ಬೆಳಸಬೇಕಾಗಿದೆ, ಇಂತಹ ರಂಗಚಟುವಟಿಕೆಯನ್ನು ಆಗಾಗ್ಯ ನಡೆಸುವು ಮೂಲಕ ಜೀವಂತವಾಗಿಡಬೇಕು ಎಂದರು.
ಎಂದು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಕನ್ನಡ ಕಲಾಸಂಘದ ಕಾರ್ಯದರ್ಶಿ ಎಸ್.ಎಸ್. ಚಂದ್ರಶೇಖರ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಡಾ.ಸಂಗೀತಾ ಗಾಂವ್‍ಕರ್ ವೇದಿಕೆಯಲ್ಲಿದ್ದು ಮಾತನಾಡಿದರು.
ನಂತರ ರಂಗಭೂಮಿ ದಿನಾಚರಣೆಯ ಅಂಗವಾಗಿ ಸಾಹಿತಿ ಸಂಶೋಧಕ ಡಾ.ಕೃಷ್ಣ ಕೋಲ್ಹಾರ್ ಕುಲಕರ್ಣಿ ರಚನೆಯ ಹಾಗೂ ಶ್ರೀಕೃಷ್ಣ ಕುಲಕರ್ಣಿ ನಿರ್ದೇಶನದ “ನಾ ಸತ್ತಿಲ್ಲ” ನಾಟಕವನ್ನು ಕನ್ನಡ ಕಲಾ ಸಂಘದ ಸದಸ್ಯರು ಮನೋಘ್ನವಾಗಿ ಅಭಿನಯಿಸಿ ತಮ್ಮ ರಂಗಭೂಮಿ ದಿನಕ್ಕೆ ಸಮರ್ಪಿಸಿದರು.
ಸದಸ್ಯರಾದ ಪ್ರಕಾಶ ಕೆ. ಕುಮಾರಿ ಭೂಮಿಕಾ, ಭಾಗ್ಯಶ್ರೀ ಕುಲಕರ್ಣಿ ಮತ್ತು ಕೆ.ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದ್ದು ಪಾಲ್ಗೊಂಡಿದ್ದರು.