ರಂಗಭೂಮಿ, ತೊಗಲು ಗೊಂಬೆ ಪ್ರದರ್ಶನದ ಮೇರು ಪ್ರತಿಭೆ ಬೆಳಗಲ್ಲು ವೀರಣ್ಣ ಅಜರಾಮರ


ಎನ್.ವೀರಭದ್ರಗೌಡ
ಬಳ್ಳಾರಿ, ಏ.02 ತಾಲೂಕಿನ  ಬೆಳಗಲ್ಲು ಗ್ರಾಮದ ವೀರಣ್ಣ  ರಂಗಭೂಮಿ ಮತ್ತು ಜನಪದ ಕಲೆ ತೊಗಲಗೊಂಬೆ ಪ್ರದರ್ಶನದ ಮೂಲಕ ದೇಶದ ಗಮನ ಸೆಳೆದವರು
ಗುಬ್ಬಿ ವೀರಣ್ಣ ಮತ್ತು ಹೊನ್ನಪ್ಪ ಭಾಗವತರ ಕಂಪನಿ ನಾಟಕಗಳಲ್ಲಿ ಮಹಿಳಾ ಪಾತ್ರ ಮಾಡುತ್ತಿದ್ದ ಮತ್ತು ಸ್ವತಃ ನಾಟಕ ಕಲಾ ಮಿತ್ರ ತಂಡ ಕಟ್ಟಿದ್ದರು.
ಇವರ ಕಂಚಿನ ಕಂಟದಿಂದ  ಬಸವೇಶ್ವರ, ಛತ್ರಪತಿ ಶಿವಾಜಿ, ಸಿಪಾಯಿ ದಂಗೆ, ಜಾನ್ಸಿರಾಣಿ ಲಕ್ಷ್ಮೀಬಾಯಿ,  ರಾಣಿ ಕಿತ್ತೂರ ಚೆನ್ನಮ್ಮ, ಸಂತ ಶಿಶುನಾಳ ಷರೀಪ,  ಬಾಪು ಕಥೆ, ಮೊದಲಾದ ತೊಗಲು ಗೊಂಬೆ ಪ್ರದರ್ಶನ ಕಲಾಸಕ್ತರ ಗಮನ ಸೆಳೆಯುತ್ತಿದ್ದವು.
1988 ರಲ್ಲಿ ರಾಷ್ಟ್ರ ಪತಿಗಳ ಮುಂದೆ 80 ಗೊಂಬೆಗಳನ್ನು ಬಳಸಿ “ಗಾಂಧಿ” ಎಂಬ ತೊಗಲುಗೊಂಬೆ ಪ್ರದರ್ಶನ ಮಾಡಿದ್ದರು. ಬಸವೇಶ್ವರ, ಸ್ವಾತಂತ್ರ ಸಂಗ್ರಾಮದ  ತೊಗಲು ಗೊಂಬೆ ಪ್ರದರ್ಶನ ದೇಶ ವಿದೇಶಗಳಲ್ಲಿ  ಪ್ರದರ್ಶಿಸಿದ್ದರು.
ತೊಗಲುಗೊಂಬೆಗಳು ಪೌರಾಣಿಕ ಕಥನ ರೂಪಗಳನ್ನು ದಾಟಿ ಚಾರಿತ್ರಿಕ ರೂಪಗಳಾಗಿ ಮೈದಾಳಿದ ಬಗೆಯನ್ನು ಸ್ವತಃ ರೋಮಾಂಚನದೊಂದಿಗೆ  ಅನುಭವಿಸುತ್ತಾ ಹೇಳುತ್ತಿದ್ದರು. ಕಲೆಗೆ ಸಮಕಾಲೀನ ಗುಣ ಒದಗಿದರೆ ಮಾತ್ರ ಸಾರ್ಥಕ ಎಂಬ ನಿಲುವು ಅವರದಾಗಿತ್ತು
ಪೌರಾಣಿಕಕ್ಕೆ  6 ಅಡಿ ಎತ್ತರದ ಗೊಂಬೆಗಳ ಪ್ರದರ್ಶನ ಮಾಡುವುದು ಇವರ ವಿಶೇಷ,
ರಾಜ್ಯೋತ್ಸವ, ಜಾನಪದ ಶ್ರೀ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ನಾಟಕ ಅಕಾಡೆಮಿ,  ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ  ಮೊದಲಾದ ಪ್ರಶಸ್ತಿಗಳು ಇವರಿಗೆ ದೊರೆತಿದ್ದವು. ಜೊತೆಗೆ  ಹಂಪಿ ಕನ್ನಡ ವಿವಿ ಕೊಡಮಾಡುವ
ನಾಡೋಜ ಪದವಿ ಸಹ ದೊರೆತಿತ್ತು.
ಇತ್ತೀಚೆಗಷ್ಟೇ ಪತ್ನಿಯನ್ನು ಅವರು ಅಗಲಿದ್ದರು. ಬಳ್ಳಾರಿಯ ರೇಡಿಯೊ ಪಾರ್ಕ್ ನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು.
ತಮ್ಮ‌9 ನೇ ವಯಸ್ಸಿನಲ್ಲಿ  ತಾಯಿಯನ್ನು ಕಳೆದುಕೊಂಡು, ಶಾಲೆ ಕಲಿಯದೆ, ಅಲೆಮಾರಿ ಶಿಳ್ಳೆಕ್ಯಾತರ ಸಮುದಾಯದ ಇವರು ತಮ್ಮ 16ನೇ ವಯಸ್ಸಿಗೇ, ಶಿಡಿಗಿನ ಮೊಳೆ ವೈ. ಚಂದ್ರಯ್ಯನವರ ಮಾರ್ಗದರ್ಶನದಲ್ಲಿ ಬಗೆಬಗೆಯ ಪಾತ್ರಗಳನ್ನು ಮಾಡುತ್ತಿದ್ದರು,
ನಟರಾಗಿ, ನಿರ್ದೇಶಕರಾಗಿ, ಸಂಗೀತ ಕಲಾವಿದರಾಗಿ, ತಂಡಗಳನ್ನು ಕಟ್ಟಿದ್ದ ಅವರು  ಹಳ್ಳಿ ಗಳಲ್ಲಿ ಬಯಲಾಟದ ಮಾಸ್ತರರಾಗಿಯೂ ಸೇವೆ ಸಲ್ಲಿಸಿದ್ದರು.
ಮೊದಲು ರಂಗಭೂಮಿ ನಂತರ ಇವರು ಆಯ್ದುಕೊಂಡಿದ್ದು ತೊಗಲುಬೊಂಬೆಗಳ ಪ್ರದರ್ಶನ.
ಕನ್ನಡದಲ್ಲಿಯೇ ತೊಗಲುಗೊಂಬೆಯಾಟ ಮಾಡುತ್ತ ದೇಶ ವಿದೇಶಗಳನ್ನು ಸುತ್ತಿದರು. ಚೀನಾ, ಅಮೆರಿಕ, ಇಸ್ರೇಲ್, ಇಂಡೋನೇಷಿಯಾ, ಬರ್ಮಾ, ಫ್ರಾನ್ಸ್ ಸೇರಿದಂತೆ ಹಲವು ವಿದೇಶಗಳಲ್ಲೂ ಬೆಳಗಲ್ ವೀರಣ್ಣ ಎಂದರೆ `ತೊಗಲುಗೊಂಬೆ ವೀರಣ್ಣ’ ಎಂಬುದಾಗಿತ್ತು.
ಕಲಾವಿದನಿಂದ ಕಲೆಗೆ ಕೀರ್ತಿ ಎಂಬಂತೆ ವೀರಣ್ಣ ಅವರಿಂದ   ತೊಗಲುಗೊಂಬೆಗೆ ಕೀರ್ತಿ ಬಂದಿತ್ತು ಎನ್ನಬಹುದು.
80ರ ದಶಕದಲ್ಲಿ ರಾಮಾಯಣದ ಅರಣ್ಯಕಾಂಡವನ್ನು ಆಧರಿಸಿ `ಪಂಚವಟಿ ಪ್ರಸಂಗ’ವನ್ನು ಮೊದಲ ಬಾರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ್ದರು.  ನಂತರ ಕಾನ್ಪುರದಲ್ಲಿ ನಡೆದ `ಅಪ್ನಾ ಉತ್ಸವ’ದಲ್ಲಿ ಪ್ರದರ್ಶನ ನೀಡಿದ ಬಳಿಕ.  ತೊಗಲುಗೊಂಬೆಗಳ ಮೂಲಕ ಇತರೇ ಕತೆಗಳನ್ನು ಪ್ರದರ್ಶನಕ್ಕೆ ಅಣಿ‌ಮಾಡಿದರು.     ಬಳ್ಳಾರಿಯ ಲೇಖಕ ವೈ. ರಾಘವೇಂದ್ರರಾವ್. ಸ್ವಾತಂತ್ರ್ಯ ಸಂಗ್ರಾಮದ ರೂಪಕವೊಂದನ್ನು  ವೀರಣ್ಣನವರಿಗೆ  ರಚಿಸಿಕೊಟ್ಟರು. ಲಾವಣಿ ಮಟ್ಟಿನ ಹಾಡುಗಳು, ಸಂಭಾಷಣೆಗಳು, ಕತೆಗೆ ತಕ್ಕ ತೊಗಲುಗೊಂಬೆಗಳಿಂದ ಬ್ರಿಟಿಷ್ ಅಧಿಕಾರಿಗಳು, ಮಂಗಲ್‍ಪಾಂಡೆ, ಝಾನ್ಸಿರಾಣಿ ಲಕ್ಷ್ಮಿಬಾಯಿ, ನಾನಾ ಸಾಹೇಬ್, ಪೇಶ್ವೆ ಮೊದಲಾದವರ ಚಿತ್ರಗಳನ್ನು ಸಂಡೂರಿನ ಕಲಾವಿದ ವಿ.ಟಿ. ಕಾಳೆಯವರು ಬಿಡಿಸಿ. ಹಿಮ್ಮೇಳವೂ ಸಿದ್ದೊಡಿಸಿ‌. ಹೊಸ ಚಿಂತನೆಯ ಲೇಖಕ, ಚಿತ್ರ ಕಲಾವಿದ ಮತ್ತು ತೊಗಲುಬೊಂಬೆ ಕಲಾವಿದರ ಸಾಂಗತ್ಯದಲ್ಲಿ ತೊಗಲುಗೊಂಬೆಗಳು ಹೊಸ ಕಾಲದ ಕಥನ ಮಾಧ್ಯಮವಾಗಿ ಮಾರ್ಪಟ್ಟವು.
ಇದೇರೀತಿ ಮಹಾತ್ಮ ಗಾಂಧೀಜಿಯವರ ಜೀವನ ಸಾಧನೆಯನ್ನು ತೊಗಲುಗೊಂಬೆಯಾಟವನ್ನಾಗಿ   ಪ್ರದರ್ಶಿಸಲು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಪ್ರತಿಷ್ಠಾನ ಆಹ್ವಾನ ನೀಡಿ 1992ರ ಅಕ್ಟೋಬರ್ 2ರಂದು ದೆಹಲಿಯಲ್ಲಿರುವ ಪ್ರತಿಷ್ಠಾನದಲ್ಲೇ `ಬಾಪೂ’ ಮೊದಲ ಪ್ರದರ್ಶನ ಕಂಡಿತ್ತು. ನಂತರ ರಾಷ್ಟ್ರಪತಿ ಭವನದಲ್ಲೂ ಪ್ರದರ್ಶನ ನೀಡಿದ್ದರು.
ಬಳ್ಳಾರಿಯ ಕಲೆಯೊಂದು ಹೀಗೆ ರಾಷ್ಟ್ರಪತಿ ಭವನವನ್ನೂ ತಲುಪಿತ್ತು. ಇದುವರೆಗೆ ಅದು ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.
ಗದಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಯವರ ಅಪೇಕ್ಷೆ ಮೇರೆಗೆ ಪ್ರೊ.ಎಂ.ಎಂ. ಕಲಬುರ್ಗಿಯವರ ನೇತೃತ್ವ ಮತ್ತು ನಿರ್ದೇಶನದಲ್ಲಿ ಪ್ರವಾದಿ ಬಸವೇಶ್ವರ ರೂಪಕವನ್ನು ತೊಗಲು ಗೊಂಬೆಯಲ್ಲಿ  ಸಿದ್ಧಮಾಡಿ ಅದನ್ನು  100 ಹೆಚ್ಚು  ಪ್ರದರ್ಶನ ಮಾಡಿದ್ದರು.
ಕುವೆಂಪು ಅವರ ಶ್ರೀರಾಮಾಯಣ ದರ್ಶನಂನ ಸುಂದರ ಕಾಂಡದ ತೊಗಲುಗೊಂಬೆಗಳ ಮೂಲಕ ಪ್ರದರ್ಶಿಸಿದ್ದರು
ಬಿ.ಪಿ, ಷುಗರ್ ಏನೂ ಇಲ್ಲದೆ ಬದುಕಿದ್ದ ಅವರು ಕಾರು ಅಪಘಾತದಲ್ಲಿ ಇಂದು ಅವರೇ ಹೇಳುತ್ತಿದ್ದಂತೆ  ಶಿವನ‌ಪಾದ ಸೇರಿದ್ದಾರೆ.