ರಂಗಭೂಮಿ ಜಾನಪದ ಕಲಾವಿದ ಶೇಷಪ್ಪಾ ಚಿಟ್ಟಾ, ಸಾಹಿತಿ ಸುಬ್ಬಣ್ಣ ಕರಕನನಳ್ಳಿಗೆ ಸನ್ಮಾನ

ಬೀದರ:ಫೆ.5: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡ ಭವನದ ಉದ್ಘಾಟನೆ ಸಮಾರಂಭವನ್ನು ಫೇ 3 ರಂದು ಬೀದರ ನಗರದ ಚಿಕ್ಕಪೇಟ್ ರಸ್ತೆ ಲಾವಣ್ಯ ಫಂಘ್ಸನ್ ಹಾಲ ಎದುರುಗಡೆ ಬಹುದಿನದ ಕನಸ್ಸು ಇಡೇರಿತು ಅರಣ್ಯ ಜೈವಿಕ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ ಖಂಡ್ರೆ ರವರು ಕನ್ನಡ ಭವನವನ್ನು ಲೋಕಾರ್ಪಣೆಯನ್ನು ಮಾಡಿದರು.
ಜಿಲ್ಲೆಯ ಖ್ಯಾತ ರಂಗ, ಜಾನಪದ ಕಲಾವಿದ ಶೇಷಪ್ಪಾ ಚಿಟ್ಟಾ ಹಾಗೂ 2016 ರಿಂದ ಕನ್ನಡ ಭವನಕ್ಕಾಗಿ ಹೋರಾಟವನ್ನು ಮಾಡಿರುವ ಸಾಹಿತಿ ಸುಬ್ಬಣ್ಣ ಕರಕನಳ್ಳಿಯವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ ಚನ್ನಶೇಟ್ಟಿ ತಾಲ್ಲೂಕ ಅಧ್ಯಕ್ಷ ಎಂ ಎಸ್ ಮನೋಹರ ಗೌರವ ಸನ್ಮಾನವನ್ನು ಮಾಡಿದರು.