ರಂಗಭೂಮಿ ಕಲಾವಿದ ಮೌನೇಶ್ ಬಡಿಗೇರ್ ಇನ್ನಿಲ್ಲ

ಹಗರಿಬೊಮ್ಮನಹಳ್ಳಿ.ಮೇ.೨೦ ರಂಗಭೂಮಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸಂಗೀತ ಹಾಡುಗಾರಿಕೆಯಲ್ಲಿ ಗಮನಸೆಳೆದಿದ್ದ ಉಲವತ್ತಿ ಮೌನೇಶ್ ಬಡಿಗೇರ್ ನಿನ್ನೆ ನಿಧನರಾಗಿದ್ದಾರೆ.
ಇವರ ನಿಧನದಿಂದ ಜಿಲ್ಲೆಯ ಒಳ್ಳೆಯ ಸಂಗೀತ ನಿರ್ದೇಶಕ ಹಾಗೂ ಗಾಯಕನನ್ನು ಕಳೆದುಕೊಂಡಿದೆ ಎಂದರ ತಪ್ಪಾಗಲಾರದು. ಏಕೆಂದರೆ ಅವರು ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಅವರ ಗರಡಿಯಲ್ಲಿ ಮರಿಯಮ್ಮನಹಳ್ಳಿ ನಾಗರತ್ನಮ್ಮ, ಸುಭದ್ರಮ್ಮ, ಕೂಡ್ಲಿಗಿಯ ರಂಗನಾಯಕಿಯರಾದ ಪದ್ಮ, ರೇಣುಕಾ, ಗೀತಾ ಎಂಬ ಅನೇಕ ಕಲಾವಿದರು ಇವರ ನಿರ್ದೇಶನದಲ್ಲಿ ಹಲವಾರು ನಾಟಕಗಳನ್ನು ನಟಿಸಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಇವರು ಭಾವಗೀತೆ ಭಕ್ತಿಗೀತೆಯ ಕ್ಯಾಸೆಟ್ಟುಗಳು ಹೊರಬಂದಿವೆ
ಇವರು ತಾಲೂಕಿನ ಉಲವತ್ತಿ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿ ಸಂಗೀತವನ್ನು ಗದಗಿನ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ ಸಂಗೀತವೇ ತಮ್ಮ ಸರ್ವಸ್ವ ಎಂದು ಪ್ರೀತಿಸಿದ ಮೌನೇಶ್ ಬಡಿಗೇರ್ ಇಂದು ನಮ್ಮನ್ನೆಲ್ಲ ಆಗಲಿ ಹೋಗಿರುವುದು ದುಃಖಕರ ಸಂಗತಿ ಎಂದು ಖ್ಯಾತ ತಬಲಾ ವಾದಕ ರಾಜ್ಯಪ್ರಶಸ್ತಿ ವಿಜೇತ ವಿರುಪಾಕ್ಷಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಾಗೂ ತಾಲೂಕಿನ ಅನೇಕ ಕಲಾವಿದ ಇವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ