ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಿದವರು ಮನ್ಸೂರ್ ಸುಭದ್ರಮ್ಮ ರವರು-ಪ್ರಭುಮಹಾಸ್ವಾಮಿಗಳು

ಸಂಡೂರು: ಜ: 2: ಬಳ್ಳಾರಿ ಜಿಲ್ಲೆ ಕಲೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ತವರೂರು ರಂಗಭೂಮಿ ಕಲೆಗೆ ಎಲೆ ಸಿದ್ದಯ್ಯ ಸ್ವಾಮಿ, ಏಳುಬೆಂಚಿ, ವೈಯಂ.ಚಂದ್ರಯ್ಯನವರು ಸಿಡಿಗನಮೊಳೆ, ಜೋಳದ ರಾಶಿ ದೊಡ್ಡನಗೌಡರು ಪ್ರಮುಖರು. ಧಾರವಾಡದ ಮನ್ಸೂರು ಮನೆತನದವರಾದ ಸುಭದ್ರಮ್ಮನವರು, ಕೊಗಳಿ ಪೊಂಪಣ್ಣನವರು ಕಲೆಯನ್ನು ಪ್ರೋತ್ಸಾಹಿಸಿದರಲ್ಲದೆ ಕಲಾವಿದರನ್ನು ಬೆಳೆಸಿ ಅಳುವಿನ ಅಂಚಿನಲ್ಲಿರುವ ರಂಗಭೂಮಿಯನ್ನು ಎತ್ತಿ ಕಟ್ಟಿ ಬೆಳೆಸಿದರು. ವೈ.ಎಂ. ಚಂದ್ರಯ್ಯನವರು ಎಲೆ ಸಿದ್ದಯ್ಯ ಸ್ವಾಮಿ, ಕೊಗಳಿ ಪೋಂಪಣ್ಣ, ಸುಭದ್ರಮ್ಮ ಮನ್ಸೂರು ಅವರು ರಂಗಭೂಮಿಯ ಉನ್ನತಿಗಾಗಿ ಅಪಾರ ಶ್ರಮವಹಿಸಿ ದೃವತಾರಾ ನಕ್ಷತ್ರಗಂತೆ ಕಂಗೊಳಿಸಿದರು ಎಂದು ಸಂಡೂರಿನ ವಿರಕ್ತಮ ಮಠದ ಪರಮಪೂಜ್ಯ ಪ್ರಭುಮಹಾಸ್ವಾಮಿಗಳು ತಿಳಿಸಿದರು.
ಅವರು ಶ್ರೀ ಪ್ರಭುದೇವರ ಸಂಸ್ತಾನ ವಿರಕ್ತಮಠದಲ್ಲಿ ದಿ.1ರಂದು ಶುಕ್ರವಾರ ಕನ್ನಡ ಮತ್ತು ಸಂಸ್ಕೃತ ಇಲಾಖೆ ವಿರಕ್ತಮಠದ ಸಹಯೋಗದೊಂದಿಗೆ ಬಿ.ಬಸವರಾಜ ಕಲಾಬಳಗದವರು ಸಂಚಾಲಕ ತಿಪ್ಪೇಸ್ವಾಮಿಯವರ ಸಾರಥ್ಯದಲ್ಲಿ ನಾಡೋಜ ಡಾ. ಸುಭದ್ರಮ್ಮ ಮನ್ಸೂರು , ಕೊಗಳಿ ಪಂಪಣ್ಣನವರ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯೋತ್ಸವ ಪುರಸ್ಕೃತೆ ಕೂಡ್ಲಿಗಿಯ ಶಿವಕುಮಾರಿ ಮಾತನಾಡಿ ಸುಭದ್ರಮ್ಮನವರು ನನಗೆ ತಾಯಿಯಾಗಿ, ಕೊಗಳಿಪಂಪಣ್ಣನವರು ನನಗೆ ತಂದೆಯಾಗಿ, ಅಣ್ಣನಾಗಿ ಮಾರ್ಗದರ್ಶನ ಮಾಡಿ ಕಲಾವಿದರನ್ನಾಗಿ ಬೆಳೆಸಿದರು ಎಂದು ತಿಳಿಸಿದರು.
ಸಂಡೂರಿನವರು ಮಾಡಲಾಗದ ಕೆಲಸವನ್ನು ಕೂಡ್ಲಿಗಿ ಸಂಚಾಲಕ ತಿಪ್ಪೇಸ್ವಾಮಿಯವರು ಮಾಡಿತೋರಿಸಿ ಈರ್ವಜೋಡಿಗಳ ಸ್ಮರಣೆ ಮಾಡಿದಿದು ಶ್ಲಾಘನೀಯ. ಪಾತ್ರಗಳಿಗೆ ಜೀವ ಕಳೆಯನ್ನು ತುಂಬಿದ ಬಳ್ಳಾರಿ ಜಿಲ್ಲೆಯ ರಂಗಭೂಮಿಯ ಧೀಮಂತ ಶ್ರೀಮಂತ ಮಹಿಳೆ ಸುಭದ್ರಮ್ಮನವರು, 10ನೇ ಶತಮಾನದಲ್ಲಿ ಕೊಗಳಿಯ ಶಿವಾಚಾರ್ಯರು ವಡ್ಡರಾಧನೆ ರಚಿಸಿದರು, ಕಲೆಯನ್ನು ಸುಭದ್ರಮ್ಮ ನವರು ಬೆಳಸಿದರೆ, ಕೊಗಳಿ ಪಂಪಣ್ಣನವೆರು ಅತಿ ಹೆಚ್ಚು ನಟರನ್ನು ಬೆಳಸಿದರು. ಈ ಈರ್ವ ಜೋಡಿಗಳು ನಮ್ಮ ಸಂಸ್ಕೃತಿಯ ರಾಯಬಾರಿ ಎಂದು ಕಸಾಪ ಮಾಜಿ ಅಧ್ಯಕ್ಷ ಸಿ.ಎಂ. ಸಿಗ್ಗಾವಿ ತಿಳಿಸಿದರು.
ಕರ್ನಾಟಕ ಜನಪದ ಪರಿಷತ್ತು ಅಧ್ಯಕ್ಷರು, ಉದಯೋನ್ಮುಖ ಪತ್ರಕರ್ತರು ಅದ ಬಸವರಾಜ ಬಣಕಾರ ಮಾತನಾಡಿ ಚಲನಚಿತ್ರ ರಂಗಕ್ಕೂ ರಂಗಭೂಮಿ ನಟರಿಗೂ ಅಜಗಜಾಂತರ ವ್ಯತ್ಯತಾಸ ವಿದ್ದು ರಂಗಭೂಮಿ ನಟನೆ ನೈಜವಾಗಿದ್ದರು ಕೂಡಾ ತಾಪತ್ರಯಗಳ ಮದ್ಯಯೂ ರಂಗಭೂಮಿಯನ್ನು ಉಳಿಸಿ ಬೆಳೆಸುತ್ತಿರುವುದಕ್ಕೆ ಸುಭದ್ರಮ್ಮ, ಕೊಗಳಿ ಪಂಪಣ್ಣನವರು ಪ್ರಮುಖರು ಎಂದು ತಿಳಿಸಿದರು, ಇನ್ನೋರ್ವ ಕಸಾಪ ಮಾಜಿ ಆಧ್ಯಕ್ಷ ಬಸವರಾಜ ಮಸೂತಿ ಮಾತನಾಡಿ 11ನೇ ವಯಸ್ಸಿಗೆ ಬಣ್ಣ ಹಚ್ಚಿ ಕಂದಗಲ್ ಹನುಮಂತರಾಯ ವಿರಚಿತ ರಕ್ತರಾತ್ರಿ ನಾಟಕದ ವಿಭಿನ್ನ ರೀತಿಯ ಪಾತ್ರಮಾಡಿ ರಂಗಭೂಮಿಯನ್ನು ಬೆಳೆಸಿದರೆ, ಕೊಗಳಿ ಪಂಪಣ್ಣನವರು ಮರೆಯಲಾರದ ಅದ್ಭುತ ನಟರಾಗಿ ಬೆಳೆಸಿದರು ಎಂದು ತಿಳಿಸಿದರು.
ಮರಿಯಮ್ಮನಹಳ್ಳಿಯ ಹೆಸರಾಂತ ಜಕಲಾವಿದೆ, ಡಾ.ನಾಗರತ್ನಮಮ್ಮಮಾತನಾಡಿ ಸುಭದ್ರಮ್ಮ ಪಂಪಣ್ಣ, ತಮ್ಮ ಎಲ್ಲಾ ಅನುಭವಗಳನ್ನು ಕಟ್ಟಿಕೊಂಡು ಕಲಾವಿದರಿಗೆ ಉತ್ತಮ ಮಾರ್ಗದರ್ಶನ ಮಾಡಿ ಕಲೆಯನ್ನು ಬೆಳೆಸಿದರು ಎಂದು ತಿಳಿಸಿದರು. ವಿರುಪಾಪುರದ ಅಂಜಿನಮ್ಮನವರು ಸುಗಮಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ವೇದಿಕೆಯ ಕಾರ್ಯಕ್ರಮವಾದ ನಂತರ ಕಲಾವಿದರು ಬೇಲೂರು ಕೃಷ್ಣಮೂರ್ತಿ ವಿರಚಿತ ಶ್ರೀಕೃಷ್ಣ ಲೀಲೆ ಎನ್ನುವ ನಾಟಕವನ್ನು ಪ್ರದರ್ಶಿಸಿದರು. ರಮೇಶ್ ಗೌಡ ಪಾಟಿಲ್ ಕೃಷ್ಣನ ಪಾತ್ರದಲ್ಲಿ ತಾಳಿಕೋಟೆ ರಾಜು ಅವರ ಪತ್ನಿ ಪ್ರೇಮ ನಾರದನ ಪಾತ್ರದಲ್ಲಿ ವೀಣಾ ಬಳ್ಳಾರಿ ಇವರು ರುಕ್ಮಿಣಿ ಪಾತ್ರದಲ್ಲಿ ವಿಜಿ.ಯವರು ಮಕರಂದನ ಪಾತ್ರದಲ್ಲಿ ಕಾಣಿಸಿಕೊಂಡರು. ಕೂಡ್ಲಿಗಿಯ ಬಿ.ಶಿವಕುಮಾರಿಯವರು ಹಾಡಿದ ಹಾಡುಗಳು ಪ್ರೇಕ್ಷಕರ ಮನ ಮುದಗೊಳಿಸಿದವು. ದೇವಲಾಪುರದ ವಿರೂಪಾಕ್ಷಪ್ಪನವರು ಅತ್ಯುತ್ತಮ ರೀತಿಯಲ್ಲಿ ತಬಲಾಸಾಥ್ ನೀಡಿದರು, ಕಾರ್ತಿಕ ಬಣಕಾರ ಅವರು ಪ್ರಾರಂಭದಲ್ಲಿ ಪ್ರಾರ್ಥನಾ ಗೀತೆಯನ್ನು ನಡೆಸಿಕೊಟ್ಟರು. ಹೆಚ್.ಎನ್. ಬೋಸ್ಲೆಯವರು ನಿರೂಪಿಸಿ, ಸ್ವಾಗತಿಸಿ ವಂದಿಸಿದರು, ಸಮಾರಂಭದಲ್ಲಿ ಹಗರಿಬಸವರಾಜಪ್ಪ, ಮೂಲಿಮನಿ ಮಲ್ಲಣ್ಣ, ಶಾರದ ಪುಸ್ತಕಾಲಯದ ವೀರಣ್ಣ, ದೇವಗಿರಿಯ ನಿವೃತ್ತ ಶಿಕ್ಷಕ ನಾಗಪ್ಪ ಅಕ್ಕನ ಬಳಗದ ಅಧ್ಯಕ್ಷೆ ಅಂಕಮನಾಳ್ ಶಾಂತಮ್ಮ, ಅರಳಿಕುಮಾರಸ್ವಾಮಿ, ಹಲವಾರು ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.