ರಂಗಭೂಮಿ ಕಲಾವಿದರಿಗೆ ಆಹಾರ ಕಿಟ್ ವಿತರಣೆ

ರಾಯಚೂರು.ಜೂ.೦೮-ಅಜೀಮ್ ಪ್ರೇಮಜಿ ಪೌಂಡೇಷನ್ ವತಿಯಿಂದ ರಂಗಭೂಮಿ ಕಲಾವಿದರಿಗೆ ಆಹಾರ ಕಿಟ್ ವಿತರಣೆ ಇಂದು ಮಾಡಲಾಯಿತು.
ನಗರದ ಶ್ರೀ ಮಾದರ ಚನ್ನಯ್ಯ ಗುರು ಫೀಠದಲ್ಲಿ ಹಿರಿಯ ರಂಗ ಭೂಮಿ ಕಲಾವಿದ ವಿ.ಎನ್.ಅಕ್ಕಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು.
ಆಹಾರ ಕಿಟ್ ವಿತರಿಸಿ ಹಿರಿಯ ಕಲಾವಿದರಾದ ವೆಂಕಟೇಶ ಆಲ್ಕೋಡ ಮಾತನಾಡಿ ಅಜೀಮ್ ಪ್ರೇಮ್ ಜಿ ಪೌಂಡೇಷನ್ ರವರು ಕಲಾವಿದರನ್ನು ಗುರುತ್ತಿಸಿ ದಿನ ಬಳಕೆಯ ಆಹಾರ ಕಿಟ್ ಗಳನ್ನು ವಿತರಿಸುತ್ತಿರುವುದು ತುಂಬ ಸಂತೋಷತಂದಿದೆ ಇವರು ಕಲಾವಿದರಿಗೆ ಮಾಡುವ ಸಹಾಯ ಸಹಕಾರ ಆ ಭಗವಂತ ಮೆಚ್ಚುವ ಕೆಲಸವಾಗಿದೆ ಪೌಂಡೇಷನ್ ರವರಿಗೆ ಸರ್ವ ಕಲಾವಿದರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಯಾಕೆಂದರೆ ಸರಕಾರ ಮಾಡುವಂತ ಕೆಲಸವನ್ನು ಇಂತ ಸಂಘ ಸಂಸ್ಥೆಗಳು ಮಾಡುತ್ತಿರುವದನ್ನು ಕಂಡು ನಮ್ಮೆಲ್ಲರ ಮನಸ್ಸಿಗೆ ತುಂಬ ಸಂತೋಷವಾಗಿದೆ. ಇವರ ಸೇವೆ ನಗರ, ಜಿಲ್ಲೆ, ರಾಜ್ಯ, ಅಂತರರಾಜ್ಯದಲ್ಲಿ ಅಜಿಮ್ ಪ್ರೇಮ್ ಜೀ ಪೌಂಡೇಷನ್ ಹೆಸರು ಬೆಳಗಲಿ ಎಂದು ಹಾರೈಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಜೀಮ್ ಪ್ರೇಮ್ ಜೀ ಪೌಂಡೇಷನ್ ಸದಸ್ಯರಾದಅಡಿವೆಪ್ಪ,
ಹರೀಶ್,ಪ್ರಸಾದ,ಲೋಹಿತ್,ರೇಣುಕಾ,ಶ್ರೀದೇವಿ ಕುಲಕರ್ಣಿ,ಜೋಷೆಫ್ ಆಶಾಪೂರ,
ರಂಗಸ್ವಾಮಿ,ಸುಧಾಕರ್ ಅಸ್ಕೀಹಾಳ,ಮಹಾಲಕ್ಷ್ಮೀಸರ್ವ ಕಲಾವಿದರು ಉಪಸ್ಥಿತರಿದ್ದರು.