
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.13: ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಬಳ್ಳಾರಿ ಇವರು 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭವ್ಯ ಭಾರತಿಗೆ ಕನ್ನಡದಾರತಿ ಎನ್ನುವ ಕಾರ್ಯಕ್ರಮವನ್ನು ಡಿ.ಆರ್.ಕೆ. ರಂಗಸಿರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಲಾವಿದರಿಗೆ ಪ್ರೋತ್ಸಾಹ ಬಹಳ ಮುಖ್ಯ
ನಾಟಕದಲ್ಲಿ ಅಭಿನಯಿಸುವುದು ಅಷ್ಟೇ ಅಲ್ಲ ಹಾಡಲು ಸಹ ಬರುತ್ತದೆ ಆದರೆ ಪ್ರೋತ್ಸಾಹ ಮತ್ತು ವೇದಿಕೆ ಬೇಕು ಎಂದು ಹಿರಿಯ ರಂಗಭೂಮಿ ಕಲಾವಿದರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವೀಣಾಕುಮಾರಿ ಆದೋನಿ ರವರು ಹೇಳಿದರು
ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತ ಕಲಾವಿದರನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷದ ವಿಷಯ ಎಂದು ಸಾಹಿತಿ ರಂಗ ನಿರ್ದೇಶಕರು ಆದ ಕೆ.ಜಗದೀಶ್ ಅವರು ಹೇಳಿದರು
ಸಂಗೀತದಿಂದ ಪ್ರತಿಯೊಬ್ಬರಿಗೂ ಆನಂದ ಸಿಗುತ್ತದೆ ಕಲಾವಿದರೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುತ್ತದೆ ಪ್ರತಿ ವಾರ ಎಲ್ಲಾ ಕಲಾವಿದರು ಸೇರಿ ಹಾಡುವುದರ ಮುಖಾಂತರ ಸಂಭ್ರಮಿಸೋಣ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಂಗ ನಿರ್ದೇಶಕರು ವಿ.ಎಸ್.ಕೆ. ವಿಶ್ವವಿದ್ಯಾಲಯ ನಾಟಕ ವಿಭಾಗದ ಉಪನ್ಯಾಸಕರು ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಹೇಳಿದರು
ವೇದಿಕೆ ಮೇಲೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಶ್ರೀಮತಿ ಲತಾಶ್ರೀ, ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಸದಸ್ಯರಾದ ಶ್ರೀ.ಎಚ್.ತಿಪ್ಪೇಸ್ವಾಮಿ,ಅಂತರಾಷ್ಟ್ರೀಯ ತೊಗಲುಗೊಂಬೆ ಕಾಲಾವಿದರಾದ ಬಿ.ವಿ. ಮಲ್ಲಿಕಾರ್ಜುನ್, ಕ.ರ.ವಿ.ರಾಜ್ಯ ಉಪಾಧ್ಯಕ್ಷರಾದ ಟಿ.ಸುನೀಲ್ ಕುಮಾರ್ ಮತ್ತು ಭೀಮ್ ಆರ್ಮಿ ಮುಖಂಡರಾದ ವೇಕಾಂಬರೀಶ ಉಪಸ್ಥಿತರಿದ್ದರು
@12bc = ಸಂವಾದ
ಹಿರಿಯ ತೊಗಲಗೊಂಬೆ ಕಲಾವಿದರಾದ ಶ್ರೀ ನಾರಾಯಣಪ್ಪ ಕಾರಿಗನೂರು ಇವರನ್ನು ಕುರಿತು ಸುಬ್ಬಣ್ಣ ತೊಗಲುಗೊಂಬೆ ಕಲಾವಿದರು ಬಳ್ಳಾರಿ ಇವರು ಸಂವಾದ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು
ನಂತರ ಕುಮಾರಿ ಅಕ್ಷಯ ಎಸ್, ಕುಮಾರಿ ಅಭಿನಯ ಎಸ್, ಆದಿತ್ಯ ರಾವ್ ಎಸ್ ದೇಶಭಕ್ತಿ ಗೀತೆ ಗಾಯನವನ್ನು ಶ್ರೀಮತಿ ವೀಣಾ ಕುಮಾರಿ,ಶ್ರೀಮತಿ ಲತಾಶ್ರೀ,ಶ್ರೀಮತಿ ರೇಣುಕಾ ಬಾವಳ್ಳಿ ಕಲಾತಂಡ ರವರು ರಂಗಗೀತೆಗಳನ್ನು
ಶ್ರೀ, ಪಂಡಿತ ರಾಘವೇಂದ್ರ ಗುಡದೂರು ಶ್ರೀ.ಹೆಚ್.ತಿಪ್ಪೇಸ್ವಾಮಿ ಕಾಲ ಬಳಗ ವಚನ ಗಾಯನವನ್ನು ಶ್ರೀಕಾಸಿಂ ಅಲಿ ನಿವೃತ್ತ ಉಪನ್ಯಾಸಕರು ಭಾವಗೀತೆಯನ್ನು ಪ್ರಸ್ತುತಪಡಿಸಿದರು ತಬಲಾ ವಾದನದಲ್ಲಿ ಯೋಗೇಶ್ ಬಳ್ಳಾರಿ ಸಹಕರಿಸಿದರು ಸ್ವಾಗತ ಸುಬ್ಬಣ್ಣ ತೊಗಲಗೊಂಬೆ ಕಲಾವಿದರು ಪ್ರಾರ್ಥನೆ ಕುಮಾರಿ ಮೈತ್ರಿ ವಂದನಾರ್ಪಣೆ ಅಕ್ಷಯ ನಿರೂಪಣೆ ವಿಷ್ಣು ಹಡಪದ ನೆರವೇರಿಸಿ ಕೊಟ್ಟರು
ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕರಾದ ಶಂಕರ್ ಮೆಟ್ರಿ ನಾಟಕ ವಿಭಾಗದ ಮುಖ್ಯಸ್ಥರಾದ ಡಾ. ದಸ್ತಗಿರಿ ಸಾಬ್ ದಿನ್ನಿ ಶಶಿಕುಮಾರ ಗಣೇಶ ಕಲಾವಿದರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು