ರಂಗಭೂಮಿಯಲಿ ಬಣ್ಣದ ಮಾತು ಕಾರ್ಯಕ್ರಮ

ಕಲಬುರಗಿ : ನ.7:ರಂಗಭೂಮಿ ಕಲೆ ನೈಜ ಕಲೆಯಾಗಿದ್ದು , ಅದನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಭಿಮತ ವ್ಯಕ್ತಪಡಿಸಿದರು .
ಕಲ್ಯಾಣ ಕರ್ನಾಟಕ ರಂಗಭೂಮಿ ಸಾಹಿತ್ಯ ಪರಿಷತ್ , ಕಲಬುರಗಿ ರಂಗಾಯಣ ಸಹಯೋಗದಲ್ಲಿ ನಗರದ ರಂಗಾಯಣ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ ರಂಗಭೂಮಿಯಲ್ಲಿ ಬಣ್ಣದ ಮಾತು ‘ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು , ಟಿ.ವಿ. ಮೋಬೈಲ್ ಹಾವಳಿಯಲ್ಲಿ ಇಂದು ನಾಟಕ ಸಂಸ್ಕøತಿ ಕಣ್ಮರೆಯಾಗುತ್ತಿದೆ . ಯುವ ಪೀಳಿಗೆಗೆ ನಾಟಕದ ಬಗ್ಗೆ ತಿಳಿಸಿಕೊಡುವ ಕಾರ್ಯ ರಂಗಭೂಮಿ ಕಲಾವಿದರು ಮಾಡಬೇಕು ಎಂದು ಸಲಹೆ ನೀಡಿದರು . ಪ್ರಧಾನ ಸಂಚಾಲಕ ಅಲ್ತಾಫ್ ರಂಗಮಿತ್ರ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್ . ಚನ್ನೂರ , ರಂಗಾಯಣದ ಉಪನಿರ್ದೇಶಕಿ ಜಗದೀಶ್ವರಿ ನಾಶಿ , ಡಾ . ಗವಿಸಿದ್ದ ಪಾಟೀಲ್ , ಡಾ.ಎಸ್.ಎಸ್.ಪಾಟೀಲ್ , ಶಂಕರಹಿಪ್ಪರಗಾ, ಡಾ.ಬಸವರಾಜ ಉಪಸ್ಥಿತರಿದ್ದರು. ನಂತರ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರು ಕಲಬುರಗಿ ರಂಗಭೂಮಿ ನಡೆದು ಬಂದ ದಾರಿ ‘ ಕುರಿತು , ಪ್ರಾಧ್ಯಾಪಕಿ ಜಯದೇವಿ ಗಾಯಕವಾಡ ಅವರು ‘ ರಂಗಭೂಮಿ ಮತ್ತು ಮಹಿಳೆ ‘ ಕುರಿತು , ಜಾನಪದ ಪರಿಷತ್‍ನ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ್ ಅವರು ‘ ಜಾನಪದ ರಂಗಭೂಮಿ ‘ ಕುರಿತು ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅವರು ರಂಗಭೂಮಿ ಮತ್ತು ಮಾಧ್ಯಮ ” ವಿಷಯ ಕುರಿತು ಉಪನ್ಯಾಸ ಮಂಡಿಸಿದರು.