ರಂಗನೇಸರ ಸಾಂಸ್ಕೃತಿಕ ಕಲಾ ಸಂಘದಿಂದ
ಸಂಗೀತ ನೃತ್ಯದ ಕಲರವ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಮಾ24: ಸಂಡೂರು ತಾಲೂಕಿನ ಎಂ.ಬಸಾಪುರ ತಾಂಡದ  ರಂಗನೇಸರ ಸಾಂಸ್ಕೃತಿಕ ಕಲಾ ತಂಡದಿಂದ ನಗರದ ಸಾಂಸ್ಕೃತಿಕ ಸಮುಚ್ಚಯದ  ಹೊಂಗಿರಣ ಸಭಾಂಗಣದಲ್ಲಿ  ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ ನೃತ್ಯ ಕಲರವದಿಂದ ನೆರೆದ ಪ್ರೇಕ್ಷಕರನ ರಂಜಿಸಲಾಯಿತು.
ಯುವಕರನ್ನು ಪ್ರೇರೇಪಿಸಿ ಅಳವಿನಂಚಿನಲ್ಲಿರುವ ಕಲೆಗಳನ್ನು ಹೆಚ್ಚಾಗಿ ತರಬೇತಿ ಮತ್ತು ಪ್ರದರ್ಶನ ನೀಡುತ್ತಾ ಬಂದಿದೆ ರಂಗನೇಸರ ಸಾಂಸ್ಕೃತಿಕ ಕಲಾ ಸಂಘ ಎಂದು ಡೊಳ್ಳು ಬಾರಿಸುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ ಹೇಳಿದರು.
ಇಂದಿನ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಾ ಡೊಳ್ಳು ನೃತ್ಯವನ್ನು ಅಚ್ಚುಕಟ್ಟಾಗಿ ಮಕ್ಕಳು ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದು  ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಪ್ರಸ್ತಾಪಿಸಿದರು.
ಕಲೆಯೆನ್ನುವುದು ಅಂತರಾಳದಲ್ಲಿ ಮೂಡುತ್ತಾ ಬರಬೇಕು, ಯುವಕರು ಜಂಗಮ ವಾಣಿಗೆ ಜೋತು ಬಿದ್ದು  ಇಂತಹ ಕಲೆಗಳಿಂದ  ದೂರವಾಗುತ್ತಿದ್ದಾರೆಂದು
ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದ ಅತಿಥಿ ಉಪನ್ಯಾಸಕ ಕೆ.ಹೇಮೇಶ್ವರ ಹೇಳಿದರು.‌
ಯುವಪೀಳಿಗೆಗೆ ಸಂಗೀತ, ನೃತ್ಯ  ನಾಟಕ, ನಿರ್ದೇಶನ, ಪ್ರದರ್ಶನ ಮಾಡುತ್ತಾ ಯುವಪೀಳಿಗೆಗಳಿಗೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವಂತಹ ಕೆಲಸ ರಂಗನೇಸರ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಚಂದ್ರಶೇಖರ ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ, ಎಂದು ಅಧ್ಯಕ್ಷತೆವಹಿಸಿದ್ದ  ರಂಗನಿರ್ದೇಶಕ ಕೆ.ಶಂಕರ್ ಮೆಟ್ರಿ ಹೇಳಿದರು.‌
ಕಾರ್ಯಕ್ರಮದಲ್ಲಿ ಸುಗಮಸಂಗೀತವನ್ನ ಹುಲಿಯಪ್ಪ ಜಿ ಅವರು ಹಾರ್ಮೂನಿಯಂ ಸಾತಿಯಲ್ಲಿ ಶಿವಕುಮಾರ ಬಂಡಿಹಟ್ಟಿ ಮತ್ತು ತಬಲದಲ್ಲಿ ಯೋಗೇಶ್ ಇದ್ದರು. ಡೊಳ್ಳು ಕುಣಿತವನ್ನ ಲೋಕರಾಜ್ ಹೆಚ್ ಮತ್ತು ತಂಡದವರಿಂದ ಪ್ರದರ್ಶಿಸಲಾಯ್ತು.
ಮುಖ್ಯ ಅತಿಥಿಗಳಾಗಿ ಜಾನಪದ ಗಾಯಕ ಜಡೇಶ ಎಮ್ಮಿಗನೂರು,  ಕಲಾವಿದರಾದ ದೊಡ್ಡಬಸಪ್ಪ ಬಿ. ಮೊದಲಾದವರು ಇದ್ದರು.  ರಂಗ ನಿರ್ದೇಶಕ ಮತ್ತು ಕಲಾವಿದ ಕೆ.ನಾಗರಾಜ  ನಿರೂಪಿಸಿದರು.