ರಂಗನಾಥ ಸ್ವಾಮಿ ರಥೋತ್ಸವ

ಸಿರವಾರ,ಏ.೦೧- ತಾಲೂಕಿನ ವಡವಟ್ಟಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು.
ಬೆಳಗ್ಗೆಯಿಂದಲೇ ಭಕ್ತರಿ ಬೇಟ್ಟದ ಮೇಲಿರುವ ಲಕ್ಷ್ಮಿ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಕೈ ಕಾರ್ಯಗಳು ಜರುಗಿದವು. ಸಂಜೆ ಸಾವಿರಾರು ಭಕ್ತರ ಮದ್ಯದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ರಥಕ್ಕೆ ಭಕ್ತರು ಬಾಳೆ ಹಣ್ಣು,ಉತ್ತತ್ತಿ, ಮಂಡಕ್ಕಿ ಎಸೆಯುವ ಮೂಲಕ ಭಕ್ತಿ ತೊರಿಸಿದರು. ಜನಪ್ರತಿನಿದಿಗಳು ಭಾಗಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ರಥೋತ್ಸವವದಲ್ಲಿ ಹಾಲಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ಪಾಲ್ಗೊಂಡು ದರ್ಶನ ಪಡೆದು, ಭಕ್ತರಿಗೆ, ಕ್ಷೇತ್ರದ ಜನರಿಗೆ ಒಳಿತು ಮಾಡಲೆಂದು, ಮುಂದೆ ಉತ್ತಮ ರೀತಿಯಲ್ಲಿ ಮಳೆ ಬೆಳೆಯಾಗಲಿ ಎಂದು ಬೇಡಿಕೊಂಡರು.
ಮಾಜಿ ಶಾಸಕ ಜಿ.ಹಂಪಯ್ಯನಾಯಕ, ಜೆಡಿಎಸ್ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್, ಜೆಡಿಎಸ್ ಹಿರಿಯ ಮುಖಂಡ ಲೋಕರೆಡ್ಡಿ, ಜಂಬುನಾಥ್ ಯಾದವ್, ಮೊಕೋ ಕನಸ್ಟ್ರಕ್ಷನ್ ಅಧ್ಯಕ್ಷ ಎಂ.ಈರಣ್ಣ, ಸೇವಾಕಂಕ್ಷಿ ಡಾ.ತನುಶ್ರೀ ಸೇರಿದಂತೆ ವಿವಿಧ ಪಕ್ಷದ ಮುಖಂಡರು, ಎಲ್ಲಾ ಸರ್ವ ಭಕ್ತಾದಿಗಳು ಇದ್ದರು.