ರಂಗನತಿಟ್ಟು ಪಕ್ಷಿಧಾಮಕ್ಕೆ ಅಂತರಾಷ್ಟ್ರೀಯ ಗೌರವ

ನವದೆಹಲಿ/ಬೆಂಗಳೂರು,ಆ.4- ಕರ್ನಾಟಕದ ಶ್ರೀರಂಗಪಟ್ಟಣದ ಬಳಿಯಿರುವ ರಂಗನತಿಟ್ಟು ಪಕ್ಷಿಧಾಮವನ್ನು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶವೆಂದು ಘೋಷಿಸಿದ ನಂತರ ಮತ್ತೊಂದು ಗೌರವಕ್ಕೆ ಪಾತ್ರವಾಗಿದೆ.

ಕರ್ನಾಟಕದ ಶ್ರೀರಂಗಪಟ್ಟಣದಲ್ಲಿರುವ ರಂಗನತಿಟ್ಟು ಪಕ್ಷಿಧಾಮವನ್ನು ಈಗ ರಾಮ್ಸಾರ್ ಪ್ರದೇಶ ಎಂದು ಘೋಷಿಸಲಾಗಿದೆ, ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಸಂರಕ್ಷಿತ ಜೌಗು ಪ್ರದೇಶವಾಗಿದೆ. ಕರ್ನಾಟಕದ ಮೊದಲ ರಾಮ್ಸಾರ್ ತಾಣ ಇದಾಗಿದೆ.

ರಂಗನತಿಟ್ಟು ಸೇರಿದಂತೆ ಜೈವಿಕ ವೈವಿಧ್ಯತೆಯ ಜಾಗತಿಕ ತಾಣಗಳಾಗಿ ಸಂರಕ್ಷಿಸಬೇಕಾದ ತೇವಭೂಮಿಗಳ ಪಟ್ಟಿಯಡಿಯಲ್ಲಿ ರಾಮ್ಸರ್ ಭಾರತದ ಇನ್ನೂ 10 ತಾಣಗಳನ್ನು ಹೆಸರಿಸಿದ್ದು ಇದೀಗ ಆ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ.

ವಿಶೇಷತೆಗಳ ಆಗರ:

ಕಾವೇರಿ ತೀರದಲ್ಲಿರುವ ರಂಗನತಿಟ್ಟು, ಬಣ್ಣದ ಕೊಕ್ಕರೆ, ಮಿಂಚುಳ್ಳಿ, ಕಾರ್ಮೊರಂಟ್‍ಗಳು, ಡಾರ್ಟರ್, ಹೆರಾನ್, ರಿವರ್ ಟರ್ನ್, ಎಗ್ರೆಟ್ಸ್, ಇಂಡಿಯನ್ ರೋಲರ್, ಬ್ಲ್ಯಾಕ್ ಹೆಡೆಡ್ ಐಬಿಸ್, ಸ್ಪೂನ್‍ಬಿಲ್, ಗ್ರೇಟ್ ಸ್ಟೋನ್ ಪ್ಲವರ್, ಮುಂತಾದ ಸುಮಾರು 170 ವಿವಿಧ ಜಾತಿಯ ಪಕ್ಷಿಗಳ ನೆಲೆಯಾಗಿದೆ.

ಕರ್ನಾಟಕ ಪ್ರವಾಸೋದ್ಯಮ ವೆಬ್‍ಸೈಟ್‍ನ ಪ್ರಕಾರ ಸ್ಪಾಟ್-ಬಿಲ್ಡ್ ಪೆಲಿಕಾನ್‍ಗಳು. ಸಾಮಾನ್ಯ ಮುಂಗುಸಿ, ಹಾರುವ ನರಿ, ಪಾಮ್ ಸಿವೆಟ್, ಸಾಮಾನ್ಯ ನೀರುನಾಯಿ, ಬಾನೆಟ್ ಮಕಾಕ್ ಮತ್ತು ಮಾರ್ಷ್ ಮೊಸಳೆಗಳಂತಹ ವಿವಿಧ ಸಸ್ತನಿಗಳು ಮತ್ತು ಸರೀಸೃಪಗಳೂ ಇಲ್ಲಿವೆ.

ವರದಿಗಳ ಪ್ರಕಾರ, 188 ಜಾತಿಯ ಸಸ್ಯಗಳು, 69 ಜಾತಿಯ ಮೀನುಗಳು, 13 ಜಾತಿಯ ಕಪ್ಪೆಗಳು ಮತ್ತು 30 ಜಾತಿಯ ಚಿಟ್ಟೆಗಳು ಇವೆ. ಈ ಅಭಯಾರಣ್ಯ ಬೆಂಗಳೂರು ನಗರದಿಂದ ಕೇವಲ 128 ಕಿಲೋಮೀಟರ್ ದೂರದಲ್ಲಿದೆ.

ಹೆಮ್ಮೆಯ ಸಂಗತಿ:

ಭಾರತದಿಂದ 10 ತಾಣಗಳನ್ನು ಜಾಗತಿಕ ಜೈವಿಕ ವೈವಿಧ್ಯತೆಯ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ಪ್ರಾಮುಖ್ಯತೆಯ ತಾಣಗಳಾಗಿ ಘೋಷಿಸಿದೆ ಇದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಪರಿಸರ ಸಚಿವಾಲಯ ಕ್ರಮವನ್ನು ಶ್ಲಾಘಿಸಿದೆ

ರಾಮ್ಸರ್ ಪ್ರದೇಶಗಳ ಸಂಖ್ಯೆ 64 ಕ್ಕೆ ಏರಿದ್ದು ಸಂರಕ್ಷಿತ ಜೌಗು ಪ್ರದೇಶದ ಒಟ್ಟು ವಿಸ್ತೀರ್ಣ 1,250,360.41 ಹೆಕ್ಟೇರ್ ಆಗಿದೆ.

ಇತರೆ ತಾಣಗಳು

ಪಟ್ಟಿಯಲ್ಲಿರುವ ಇತರ ತಾಣಗಳೆಂದರೆ ತಮಿಳುನಾಡಿನ ಕೂಂಡÀಂಕುಳಂ ಪಕ್ಷಿಧಾಮ, ಮನ್ನಾರ್ ಗಲ್ಫ್ ಆಫ್ ಮನ್ನಾರ್ ಮರೈನ್ ಬಯೋಸ್ಫಿಯರ್ ರಿಸರ್ವ್, ವೆಂಬನ್ನೂರ್ ವೆಟ್‍ಲ್ಯಾಂಡ್ ಕಾಂಪ್ಲೆಕ್ಸ್, ವೆಲ್ಲೋಡ್ ಪಕ್ಷಿಧಾಮ, ವೇದಂತಂಗಲ್ ಪಕ್ಷಿಧಾಮ ಮತ್ತು ಉದಯಮಾರ್ತಾಂಡಪುರಂ ಪಕ್ಷಿಧಾಮ, ಇದರ ಜೊತೆಗೆ ಒಡಿಶಾದ ಸತ್ಕೋಸಿಯಾ, ,ಲಾರ್ಜ್, ಒಡಿಶಾದ ಗಾರ್ಜ್. ಮತ್ತು ಮಧ್ಯಪ್ರದೇಶದ ಸಿರ್ಪುರ್ ವೆಟ್ಲ್ಯಾಂಡ್ ಕೂಡ ಈ ಪಟ್ಟಿಯಲ್ಲಿ ಸೇರಿವೆ,