ರಂಗಣ್ಣ ಪಾಟೀಲ್ ಅಳ್ಳುಂಡಿ ಪರ ಪ್ರಚಾರ ನ.೨೧ರಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ

ದೇವದುರ್ಗ.ನ.೧೫-ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಂಗಣ್ಣ ಪಾಟೀಲ್ ಅಳ್ಳುಂಡಿ ಪರವಾಗಿ ಪಟ್ಟಣದಲ್ಲಿ ಗೆಳೆಯರ ಬಳಗದಿಂದ ಸೋಮವಾರ ಪ್ರಚಾರ ನಡೆಸಲಾಯಿತು.
ಕಸಾಪ ಮಾಜಿ ತಾಲೂಕು ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿ ಮಾತನಾಡಿ, ರಂಗಣ್ಣ ಪಾಟೀಲ್ ಅಳ್ಳುಂಡಿ ಕಸಾಪ ತಾಲೂಕು ಅಧ್ಯಕ್ಷರಾಗಿ ೨ ಅವಧಿಗೆ ಮತ್ತು ಕಸಾಪ ಜಿಲ್ಲಾ ಗೌರವ-ಕಾರ್ಯದರ್ಶಿ ಸೇವೆ ಸಲ್ಲಿಸಿದ್ದಾರೆ. ಎರಡು ದಶಕಗಳಿಂದ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ. ದೇವದುರ್ಗ ತಾಲೂಕಿಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಗಬೇಕಿದೆ. ಈ ಹಿನ್ನೆಲೆ ಸರ್ವರೂ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರಿಗೆ ಬೆಂಬಲಿಸಬೇಕು ಎಂದರು.
ಪುರಸಭೆ ಮಾಜಿ ಸದಸ್ಯ ವೆಂಕಟೇಶ ಸೋಮಕಾರ, ಬಸನಗೌಡ ವೆಂಕಟಾಪುರ, ವಕೀಲ ಶಿವನಗೌಡ ಗೌರಂಪೇಟೆ, ಶೇಖ ಮುನ್ನಾಬೈ, ಸುರೇಶ ಚಿಂತಲಕುಂಟಾ, ಕರವೇ ಅಧ್ಯಕ್ಷ ಶ್ರೀನಿವಾಸ ದಾಸರ, ಸುಲ್ತಾನ್ ಬಾಬು ಕೊಪ್ಪರ, ಮಲ್ಲಿಕಾರ್ಜುನ ಪಾಟೀಲ್ ಹಿರೇಬೂದೂರು, ಹಮೀದ್ ಇಡಪನೂರು, ಚಂದ್ರಶೇಖರ ಛಲುವಾದಿ, ಬಸನಗೌಡ ಅಳ್ಳುಂಡಿ, ಸಿದ್ದಪ್ಪ ಗೌರಂಪೇಟೆ, ಮಹಾದೇವ ಚಿಕ್ಕಬೂದೂರು ಇದ್ದರು.