ರಂಗಜಂಗಮ ಸಂಸ್ಥೆಯಿಂದ ಬೀಚಿ ಪುಣ್ಯಸ್ಮರಣೆ

ಬಳ್ಳಾರಿ ಏ 24 : ನಗರದ ಡಿ.ಆರ್ ಕೆ ರಂಗಸಿರಿ ಟ್ರಸ್ಟ್ ವೇದಿಕೆಯಲ್ಲಿ ಬೀಚಿ ಅವರ ಪುಣ್ಯಸ್ಮರಣೆ ಅಂಗವಾಗಿ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಳ್ಳಾರಿ ರಂಗಜಂಗಮ ಸಂಸ್ಥೆ ಹಾಗೂ ಡಿ.ಆರ್ ಕೆ ರಂಗಸಿರಿ ಟ್ರಸ್ಟ್ ಸಹಯೋಗದಲ್ಲಿ ನಿನ್ನೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೀಚಿ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸುವ ಮೂಲಕ ಉದ್ಘಾಟನೆಯನ್ನು ಮಾಡಿದ ಗಾಂಧಿಭವನದ ಅಧ್ಯಕ್ಷ ಟಿ.ಜಿ.ವಿಠ್ಠಲ್ ಮಾತನಾಡಿ. ಬಳ್ಳಾರಿ ಜಿಲ್ಲೆ ಕಲಾವಿದರ ತವರೂರು ಇಲ್ಲಿನ ಕಲಾವಿದರು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನ ಮಾಡಿದ್ದಾರೆ. ಅದೇಸಾಲಿಗೆ ಹಾಸ್ಯರತ್ನ ಬೀಚಿಯವರು ಕೂಡ ಸೇರುತ್ತಾರೆ.ಅವರು ಬಳ್ಳಾರಿ ಜಿಲ್ಲೆಯವರು ಎಂಬುದೇ ನಮಗೆಲ್ಲಾ ಸಂತಸದ ವಿಷಯ ಅವರ ಜನ್ಮದಿನಾಚರಣೆಯನ್ನಹಮ್ಮಿಕೊಂಡಿರುವುದು ಸಂತಸದ ವಿಷಯ. ಅನೇಕ ಹಿರಿಯರನ್ನು ನೆನಪು ಮಾಡಿಕೊಳ್ಳುವ ಮೂಲಕ ಅವರಂತೆ ನಾವು ನೀವು ಬದುಕಿ ಬಾಳಬೇಕು ಎಂಬುದಾಗಿ ನುಡಿದರು.
ಬೀಚಿಯವರ ಜೀವನ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಚಾಂದ್‍ಭಾಷಾ , ಪರಿಪಕ್ವತೆಯ ಫಲ ಸಂಸ್ಕೃತಿಯ ಅನಾವರಣ ಯುವಕರಿಗೆ ಬೀಚಿಯವರ ಕವನಗಳನ್ನು ಓದಿ ಅರ್ಥಮಾಡಿಕೊಂಡಾಗ ಮಾತ್ರ ಅವುಗಳು ಅರ್ಥವಾಗಲು ಸಾಧ್ಯ. ಸಂಸ್ಕೃತಿ ಪರಿಚಯವಾಗದ ಹೊರತು ವಿಷಯಗಳು ಅನಾವರಣಗೊಳ್ಳಲು ಸಾಧ್ಯವಿಲ್ಲ.ಬದುಕಿನ ನೆನಪುಗಳು ಪ್ರತಿಬಿಂಬವಾಗಿರಲು ಸಾಧ್ಯ ಅವುಗಳ ವಿಕಾಸದಲ್ಲಿ ಜನರ ಜೀವನದ ಪ್ರತಿಬಿಂಬವನ್ನು ಕಂಡು ಅದರ ಬದಲಾವಣಿಗೆಗೆ ಪ್ರಯತ್ನ ಮಾಡುವ ಕ್ರಿಯೆ ಗೆ ತೊಡಗಿಕೊಳ್ಳುವಂತೆ ಬೀಚಿಯವರ ಸಾಹಿತ್ಯ ಮತ್ತು ಅವರ ಜ್ಞಾನ ನಮಗೆ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲಾವಿದ ವೆಂಕೋಬಾಚಾರಿ ಅವರು ಮಾತನಾಡುತ್ತಾ ಬೀಚಿಯವರು ಮಹಾನ್ ಹಾಸ್ಯ ಸಾಹಿತಿ ಹಾಗೂ ನಾಟಕಕಾರರು ಕೂಡ ಅವರ ಹಲವಾರು ನಾಟಕಗಳು ಸಂಪ್ರದಾಯವನ್ನು ವಿರೋದಿಸಿ ಸಮುದಾಯಕ್ಕೆ ಒಳಿತನ್ನು ಬಯಸಿ ನಾಟಕ ಸಾಹಿತ್ಯವನ್ನು ರಚಿಸದ್ದರು ಎಂದು ಹೇಳಿದರು.
ವೀರೇಶ ದಳವಾಯಿ ಅವರು ತತ್ವಪದ ಹಾಗೂ ವಚನಗಳ ಗಾಯನ ಪ್ರಸ್ತುತ ಪಡಿಸಿದರು. ಸ್ವಾಗತವನ್ನು ರಂಗಜಂಗಮ ಸಂಸ್ಥೆಯ ಹಡಪದ ವಿಷ್ಣು, ವಂದನಾರ್ಪಣೆಯನ್ನು ಕೆ.ನಾಗರಾಜ ನೆರವೇರಿಸಿದು. ನಿರೂಪಣೆಯನ್ನು ಡಾ, ಅಣ್ನಾಜಿ ಕೃಷ್ಣಾರೆಡ್ಡಿ ನೆರವೇರಿಸಿದರು.