ರಂಗಗೀತೆಗಳು ಸಾಮಾಜಿಕ ಅರಿವು ನಾಟಕ ಪ್ರದರ್ಶನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.18: ಬಂಡಿಹಟ್ಟಿ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಹಾಗೂ ಅಕ್ಷಯ ಕಲಾ ಟ್ರಸ್ಟ್ ಹೊಸಯರ್ರಗುಡಿ ಇವರ ಪ್ರಯೋಜಿತ ಕಾರ್ಯಕ್ರಮದಡಿ ರಂಗ ಗೀತೆಗಳು ಮತ್ತು ಸಾಮಾಜಿಕ ಅರಿವು ನಾಟಕ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ಬೀಮಪ್ಪ ಹಾರ್ಮೋನಿಯಂ ಮಾಸ್ಟರ್ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಅತಿಥಿ ಉಪನ್ಯಾಸಕರು ಡಾಕ್ಟರ್ ಕೆ.ಬಸಪ್ಪ ವಹಿಸಿದ್ದರು ಹಾಗೂ ಊರಿನ ಎಲ್ಲಾ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.ಉದ್ಘಾಟಕರಾದ ಸಣ್ಣ ಬಿ ಎಂ ಭೀಮಪ್ಪ ರವರು ಮಾತನಾಡಿ ನಶಿಸಿಹೋಗುವ ಮೂಲ ಕಲೆಗಳ ಬಗ್ಗೆ ಯುವ ಜನರಿಗೆ ಮುಂದಿನ ಯುವ ಪೀಳಿಗೆಗೆ ಕಲೆ ಸಾಹಿತ್ಯ ಸಂಗೀತ ಹೊಡಿಬೇಕು ಎನ್ನುವ ನಿಟ್ಟಿನಲ್ಲಿ ಅವರು ಮಾತನಾಡಿದರು ನಮ್ಮ ತಾಯ್ನಾಡಿನ ಕಲೆಗಳು ಜಾನಪದ ಹಾಡುಗಳು ರಂಗ ಗೀತೆಗಳು ಗೀಗಿ ಪದಗಳು ಲಾವಣಿ ಪದಗಳು ದೊಡ್ಡಾಟ ಸಣ್ಣಾಟ ಬೈಲಾಟದಂತ ಸಾಮಾಜಿಕ ಅರಿವು ನಾಟಕ ನಮ್ಮ ನಾಡಿನ ಮೂಲ ಕಲೆಗಳಾಗಿದ್ದವು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಈ ಮಾಧ್ಯಮಗಳಿಂದ ನಮ್ಮ ಮೂಲ ಕಲೆಗಳು ಕಣ್ಮರೆಯಾಗಿವೆ ಎಂದು ಅವರು ತಿಳಿಸಿಕೊಟ್ಟರು ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ತಮ್ಮ ಅಧ್ಯಕ್ಷ ನುಡಿಗಳಲ್ಲಿ ಡಾಕ್ಟರ್ ಕೆ ಬಸಪ್ಪ ರವರು ಮೂಲ ಕಲೆ ಸಾಹಿತ್ಯಗಳು ಉಳಿಸುವ ಕಲಾವಿದರನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಇವತ್ತಿನ ಕಲಾವಿದರು ವಾಸ್ತವದ ಮೂಲ ಕಲೆಗಳನ್ನು ಬಿಟ್ಟು ಮೊಬೈಲ್ ಇಂದ ಬರ್ತಕಂತ ಕರೋಕೆ ಸಾಂಗ್ ಗಳನ್ನು ಕಲಿತು ಆಡುವಂತದು ಜಾಸ್ತಿ ಆಗ್ತಾ ಇದೆ ವಾದ್ಯಗಳನ್ನ ಹಿಡಿದುಕೊಂಡು ಆಡುವಂತ ಕಲಾವಿದರು ಕಡಿಮೆಯಾಗುತ್ತಾರೆ ಹಾಗಾಗಿ ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ಕಲಾವಿದರಿಗೆ ಇಲಾಖೆಯವರು ಮೊದಲ ಆದ್ಯತೆ ನೀಡಬೇಕು ಹಾಗೇನೆ ಅವರಿಗೆ ಪ್ರೋತ್ಸಾಹಿಸಬೇಕು ಎಂದು ಅವರು ಅಧ್ಯಕ್ಷ ನುಡಿಗಳನ್ನು ತಿಳಿಸಿದರು  ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕೊಟ್ರೇಶ ಮತ್ತು ತಂಡದವರಿಂದ ರಂಗ ಗೀತೆಗಳು ಕಾರ್ಯಕ್ರಮ ನಡೆಯಿತು ತದನಂತರ ಎಚ್ ರಮೇಶ್ ಮತ್ತು ತಂಡದವರಿಂದ ಸಾಮಾಜಿಕ ಅರಿವು ನಾಟಕ ಅತ್ಯಂತ ಯಶಸ್ವಿಯಾಗಿ ಮೂಡಿಬಂತು ಎಂದು ತಿಳಿಸುತ್ತೇವೆ ಈ ಕಾರ್ಯಕ್ರಮದಲ್ಲಿ ಕಲಾವಿದರಾದ ಹುಲುಗಪ್ಪ ಎಸ್ ಎಂ ಬಿ ಆನಂದ ವೈ ತಾಯಪ್ಪ ಅಶ್ವಿನಿ ವಿಜಯಕುಮಾರ್ ಎಲ್ ಕೊಟ್ರೇಶ ರಮೇಶ ಎಚ್ ಜಿ ಸುಂಕಪ್ಪ ಅಧ್ಯಕ್ಷರು ಅಕ್ಷಯ್ ಕಲ್ಲ ಟ್ರಸ್ಟ್ ಹೊಸಯರ್ರ ಗುಡಿ ಮತ್ತು ಸಮಾಜ ಸೇವಕರಾದ ವೆಂಕೋಬಣ್ಣ ಕಲಾಪೋಷಕರಾದ ಶಿವಶರಣನ್ನ ಇನ್ನು ಅನೇಕ ಜನರು ಭಾಗವಹಿಸಿ ಕಾರ್ಯಕ್ರಮ ಅತ್ಯಂತ ಯಶಸ್ವಿಗೊಳಿಸಿದರು ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

One attachment • Scanned by Gmail