ರಂಗಂಪೇಟೆಯಲ್ಲಿ ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಶಹಾಪೂರ:ಸೆ.17:ಕಲ್ಯಾಣ ಕರ್ನಾಟಕದ ಸ್ವಾತಂತ್ಯ್ರದ ಜೊತೆಗೆ ನಿಜಾಮನ ಕಪಿಮುಷ್ಟಿಯಿಂದ ವಿಮೋಚನೆಗೊಂಡು ಭಾರತದ ಒಕ್ಕೂಟಕ್ಕೆ ವಿಲಿನಗೊಂಡ ದಿನವೇ ಈ ಭಾಗದ ನಿಜಸ್ವಾತಂತ್ಯ್ರದ ದಿನ ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಇಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚಾರಣೆ ನಿಮಿತ್ಯ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಹೈದರಬಾದ್ ಕರ್ನಾಟಕ ವಿಮೊಚನಾ ದಿನವನ್ನು ಸರಕಾರ ಕಳೆದ 3 ವರ್ಷಗಳಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಕೇತವಾಗಿದ್ದು, ಈ ಭಾಗಕ್ಕೆ ನಿಜವಾದ ಸ್ವಾತಂತ್ಯ್ರದ ದಿನ ಇದಾಗಿದ್ದು, ಈ ವಿಮೊಚನಾ ಚಳುವಳಿಯಲ್ಲಿ ನಮ್ಮ ಭಾಗದ ಅನೇಕ ಜನ ಮಹಾನಿಯರು ದುಡಿದು ದೇಶಕ್ಕಾಗಿ ಈ ಭಾಗಕ್ಕಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ್ದಾರೆ.
ರಜಾಕಾರರ ಹಾವಳಿಯಲ್ಲಿ ರಾಜನಕೊಳ್ಳುರಿನ ವಿರುಪಾಕ್ಷಾಪ್ಪ ಗೌಡರು ವಿಮೋಚನಾ ಹೋರಾಟದಲ್ಲಿ ವೀರ ಮರಣವನ್ನಪ್ಪಿದರು ಎಂದು ಹೆಳಿದರು, ಜೊತೆಗೆ ಈ ಚಳುವಳಿಯ ಮುಖ್ಯ ಹೋರಾಟಗಾರರಾದ ಯಾದಗಿರಿಯ ಕೋಲುರು ಮಲ್ಲಪ್ಪ, ವಿಶ್ವನಾಥರೆಡ್ಡಿ ಮುದ್ನಾಳ, ವಿಧ್ಯಾಧರ ಗುರುಜಿ, ಅಚ್ಚಪ್ಪಗೌಡ ಸುಬೇದರ ಸಗರ, ದುಮ್ಮದ್ರಿ ಶರಣಗೌಡ, ಬ್ಯಾರಿಸ್ಟರ್ ರಾಜ ವೆಂಕಟಪ್ಪ ನಾಯಕ ಸೇರಿದಂತೆ ಸುರಪುರ ಸಂಸ್ಥಾನದ ಅರಸರ ಕೋಡುಗೆ ಕೂಡ ಈ ಚಳುವಳಿಗೆ ಮಹತ್ತರವಾಗಿದೆ ಎಂದು ಅಂಗಡಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ. ಶಿವಶರಣಪ್ಪ ಹೆಡಿಗಿನಾಳ, ಶ್ರೀಕಾಂತ ರತ್ತಾಳ, ಲಕ್ಷ್ಮೀ ಪತ್ತಾರ, ರೇಖಾ ಯಾದಗಿರಕರ ಪಾಲ್ಗೊಂಡಿದ್ದರು. ವಿಮೋಚನ ಚಳುವಳಿ ಇತಿಹಾಸ ಕುರಿತು ಬಲಭೀಮ ಪಾಟೀಲ್ ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಅಂಬಿಕಾ ನಿರೂಪಿಸಿದರು, ಮರಳುಸಿದ್ದಪ್ಪ ಸ್ವಾಗತಿಸಿದರು, ಪ್ರವೀಣ ಜಕಾತಿ ವಂದಿಸಿದರು.