ಯೋಧ ಚನ್ನಬಸು ತುಕ್ಕನ್ನವರ್ ಗೆ ಸುಕರವೇಯಿಂದ ಸನ್ಮಾನ

ದಾವಣಗೆರೆ.ಮಾ.8;ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ  ದಾವಣಗೆರೆಗೆ ಆಗಮಿಸಿದ ಯೋಧ ಚನ್ನಬಸು ತುಕ್ಕನ್ನವರ್ ಅವರಿಗೆ ಸುವರ್ಣ ಕರ್ನಾಟಕ ವೇದಿಕೆ ವತಿಯಿಂದ ತಾಯಿ ಭುವನೇಶ್ವರ ಪೋಟೋ ನೀಡುವುದರ ಮೂಲಕ ಸನ್ಮಾನಿಸಿ, ಗೌರವಿಸಲಾಯಿತು.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮ ಮೂಲದ ಲಕ್ಷ್ಮಣ ತುಕ್ಕನ್ನವರ್- ಗಂಗವ್ವ ದಂಪತಿ ಪುತ್ರರಾದ ಚನ್ನಬಸು ತುಕ್ಕನ್ನವರ್ ಹಾಳಿ ದಾವಣಗೆರೆಯಲ್ಲಿ ವಾಸಿಸುತ್ತಿದ್ದಾರೆ.ಇವರು ಬೆಂಗಳೂರು, ಕಾರ್ಗಿಲ್, ರಾಜಸ್ಥಾನ, ಮಣಿಪುರ, ನಾಗಾಲ್ಯಾಂಡ್, ಸಿಕಂದರಾಬಾದ್, ಜಮ್ಮು- ಕಾಶ್ಮೀರ, ಉತ್ತರಪ್ರದೇಶ, ನವದೆಹಲಿ, ಚಂಡೀಗಢ, ಉತ್ತರಾಖಂಡ ಸೇರಿ ವಿವಿಧೆಡೆ ಭಾರತೀಯ ಸೇನೆ (9 ಇಂಜಿನಿಯರ್ ರೆಜಿಮೆಂಟ್)ಯಲ್ಲಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದ್ದಾರೆ.ಈ ಸಂದರ್ಭದಲ್ಲಿ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಂತೋಷ್‌ಕುಮಾರ್, ಕಣವೇಶ್, ಕುಮಾರ್, ಶಿವು, ನಮ್ಮ ಕೈ ಕರುನಾಡ ವೇದಿಕೆಯ ಟಿ.ಮಂಜುನಾಥಗೌಡ, ಮಹೇಶ್ ಮುಂತಾದವರು ಉಪಸ್ಥಿತರಿದ್ದರು.