ತಾಳಿಕೋಟೆ:ಎ.9: ವಿಧಾನಸಭಾ ಚುನಾವಣಾ ಹಿನ್ನೇಲೆಯಲಿ ತಾಳಿಕೋಟೆ ನಗರಕ್ಕೆ ಆಗಮಿಸಿದ 105 ಜನ ಶಸಸ್ತ್ರ ಸೀಮಾ ಭಲ ಬಟಾಲಿಯನ್ ಯೋಧರು ಮತ್ತು ಪೊಲೀಸ್ ಸಿಬ್ಬಂದಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.
ಸರ್ಕಾರದ ಹಾಗೂ ಚುನಾವಣಾ ಆಯೋಗದ ಮುನ್ನೇಚ್ಚರಿಕೆ ನಿಯಮದಂತೆ ಶಸಸ್ತ್ರ ಸೀಮಾ ಭಲ ಬಟಾಲಿಯನ್ ಯೋಧರು ಹಾಗೂ ಪೊಲೀಸ್ ಸಿಬ್ಬಂದಿಗಳು ಪಟ್ಟಣದ ಪೊಲೀಸ್ ಠಾಣಾ ಆವರಣದಿಂದ ಪಥ ಸಂಚಲನ ಪ್ರಾರಂಬಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕತ್ರಿ ಬಜಾರ, ಶ್ರೀ ಖಾಸ್ಗತೇಶ್ವರ ಮಠದ ರಸ್ತೆ, ಅಂಬೇಡ್ಕರ್ ನಗರ, ಭೋವಿ ಗಲ್ಲಿ, ಪಂಚಸೈಯದ ದರ್ಗಾ, ಕತ್ರಿ ಬಜಾರ, ಎಂ.ಜಿ.ರಸ್ತೆ, ಶಿವಾಜಿ ಮಹಾರಾಜ ವೃತ್ತ, ಮಹಾರಾಣಾ ಪ್ರತಾಪ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಚನ್ನಮ್ಮ ವೃತ್ತ, ಎಸ್.ಕೆ.ನಗರ, ಚೇತಕ ಸರ್ಕಲ್ ಮೂಲಕ ಮರಳಿ ಪೊಲೀಸ್ ಠಾಣೆ ತಲುಪಿತು.
ಪಥಸಂಚಲನಕ್ಕೆ ಡಿಎಸ್‍ಪಿ ಕರುಣಾಕರ ಶೆಟ್ಟಿ, ಸಿಪಿಐ ಮಲ್ಲಿಕಾರ್ಜುನ ತುಳಗೇರಿ, ತಹಶಿಲ್ದಾರ ಕೀರ್ತಿ ಚಾಲಕ ಅವರು ಚಾಲನೆ ನೀಡಿದರು.
ಪಥ ಸಂಚಲನ ವೇಳೆ ಪಟ್ಟಣದ ನಾಗರಿಕರು ದಾರಿಯುದ್ದಕ್ಕೂ ರಸ್ತೆಯಲ್ಲಿ ರಂಗೋಲಿ ಬಿಡಿಸಿ ಯೋಧರ ಮೇಲೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಈ ಪಥಸಂಚಲನದಲ್ಲಿ ತಾಳಿಕೋಟೆ ಪೊಲೀಸ್ ಠಾಣಾ ಪಿ.ಎಸ್.ಐ.ಸುರೇಶ ಮಂಟೂರ, ಮುದ್ದೇಬಿಹಾಳ ಪೊಲೀಸ್ ಠಾಣಾ ಪಿ.ಎಸ್.ಆಯ್.ಆರೀಪ ಮುಶಾಪುರಿ, ಒಳಗೊಂಡು ಮುದ್ದೇಬಿಹಾಳ, ತಾಳಿಕೋಟೆ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.