ಯೋಧರು ದೇಶದ ಬೆನ್ನೆಲುಬು-ಸುರೇಶ್

ಕೆಜಿಎಫ್:ಸೆ:೨೧: ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅವರಣದಲ್ಲಿ ರೊಟರಿ ಸಂಸ್ಥೆ , ಇನ್ನರ್‌ವೀಲ್ ಸಂಸ್ಥೆ ಹಾಗೂ ಆರ್.ಎಲ್.ಜಾಲಪ್ಪ ಆಸ್ಪತ್ರೆಗಳ ಸಹಯೋಗದೊಂದಿಗೆ ನಿವೃತ ಯೋಧರ ಕುಟುಂಬಗಳಿಗಾಗಿ ಉಚಿತ ಕಣ್ಣಿನ ತಪಾಸಣಾ ಶಿಭಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಹಕಾರಿ ಅಧ್ಯಕ್ಷ ಅ.ಮು.ಲಕ್ಷ್ಮಿನಾರಾಯಣ ದೇಶದ ಗಡಿಯಲ್ಲಿ ಕಾಯುವ ಯೋದರು ನಿಜವಾದ ಹಿರೋಗಳು ಮತ್ತು ಅನ್ನ ನೀಡುವ ರೈತರು ದೇಶದ ಎರಡು ಕಣ್ಣುಗಳಿದ್ದಂತೆ ಅವರಿಗಾಗಿ ಮತ್ತು ಅವರ ಕುಟುಂಬಗಳ ಆರೋಗ್ಯವನ್ನು ಸುಸ್ತಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ದೃಷ್ಠಿಯಿಂದ ಕಣ್ಣುಗಳ ತಪಾಸಾಣಾ ಶಿಭಿರವನ್ನು ಎರ್ಪಡಿಸಲಾಗಿದ್ದು ಪ್ರತಿಯೋಬ್ಬ ಯೋದರ ಕುಟುಂಬಗಳು ಸದ್ಬಳಕೆ ಮಾಡಿಕೊಳ್ಳಬೇಕು ನಮ್ಮ ರೋಟರಿ ಸಂಸ್ಥೆವತಿಯಿಂದ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.
ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ಮಾತನಾಡಿ ದೇಶದ ಗಡಿಯಲ್ಲಿ ನಮ್ಮ ದೇಶವನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಯೋಧರು ನಿವೃತ್ತರಾದ ನಂತರ ಅವರ ಹಾಗೂ ಕುಟುಂಭ ವರ್ಗಕ್ಕೆ ನಾವು ಇಂತಹ ಪುಣ್ಯದ ಕೆಲಸಗಳನ್ನು ನಿರಂತರವಾಗಿ ಮಾಡಬೇಕು ಇದರಿಂದ ನಮಗೆ ಆತ್ಮತೃಪ್ತಿ ದೊರಕಲಿದೆ ಎಂದರು.
ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಸುಧದಿನೇಶ್ ಮಾತನಾಡಿ ನಮ್ಮ ಸಂಸ್ಥೆ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ನಮ್ಮ ಸಂಸ್ಥೆಯಲ್ಲಿರುವ ಸದಸ್ಯರು ಕೆಜಿಎಫ್ ನಗರದ ನಂಟು ಹೊಂದಿರುವ ಹಿನ್ನಲೆಯಲ್ಲಿ ಮತ್ತು ನಿವೃತ್ತ ಯೋದರಿಗೆ ನಮ್ಮ ಕೈಲಾದ ಸೇವೆಯನ್ನು ಮಾಡಬೇಕು ಎಂದು ನೀರ್ಧಾರಿಸಿ ಉಚಿತ ಕಣ್ಣಿನ ತಪಾಸಣೆ ಶಿಭಿರವನ್ನು ನಡೆಸಲಾಗುತ್ತಿದೆ ಕಣ್ಣಿನ ತಪಾಸಣೆಯಲ್ಲಿ ವೈದ್ಯರು ಕಣ್ಣಿನ ತೊಂದರೆ ಅನುಭವಿಸುತ್ತಿರುವವರಿಗೆ ಕನ್ನಡ ಬೇಕು ಎಂದು ಸೂಚಿಸಿದರೆ ನಮ್ಮ ಸಂಸ್ಥೆವತಿಯಿಂದ ಉಚಿತವಾಗಿ ಕನ್ನಡಗಳನ್ನು ವಿತರಿಸಲಾಗುವುದು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರು ಸಹ ನಾವು ಸಹಕಾರ ನೀಡಲಿದ್ದೇವೆ ಎಂದು ಹೇಳಿದರು.
ನಿವೃತ್ತ ಯೋಧರ ಸಂಘದ ಜಿಲ್ಲಾಧ್ಯಕ್ಷ ಜಗನಾಥ್ ,ಕೆಜಿಎಫ್ ಅಧ್ಯಕ್ಷ ಶ್ರೀಕುಮಾರ, ಗೌರವ ಅಧ್ಯಕ್ಷ ಶ್ರೀನಿವಾಸ್,ಮಧಿವಣ್ಣನ್ ,ಬಾಬು,ಜಂಟಿ ಕಾರ್ಯದರ್ಶಿ ದೇವಿಡ್ ,ಪ್ರಭಾವತಿ,ಭಾರತಿರಾಮದಾಸ್ ,ಪವಿತ್ರರೆಡ್ಡಿ ಡಾ: ಮುರಳಿಧರ್ ಹಾಗೂ ಇತರರು ಹಾಜರಿದ್ದರು.