ಯೋಧರಿಗೆ ಸನ್ಮಾನ

ಕೋಲಾರ,ಜು,೨೮- ಕಾರ್ಗಿಲ್ ವಿಜಯ ದಿನಾಚರಣೆ ಅಂಗವಾಗಿ ಕೋಲಾರದ ಟೇಕಲ್ ರಸ್ತೆಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿನ ಸ್ಥಾಪಿಸಲಾಗಿರುವ ಕಾರ್ಗಿಲ್ ಸ್ಮಾರಕ ಸ್ಥಳದಲ್ಲಿ ಮಾಜಿ ಯೋಧರಿಗೆ ಸನ್ಮಾನ ನಡೆಯಿತು.
ಇದಕ್ಕೂ ಮೊದಲು ನಗರದಲ್ಲಿ ಮಾಜಿ ಯೋಧರಿಂದ ವಿಜಯೋತ್ಸವ ಯಾತ್ರೆ ಮಾಡಲಾಯಿತು. ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ಮತ್ತು ಅನಿಲ್‌ಕುಮಾರ್, ಜಿಲ್ಲಾ ಯೋಧರ ಟ್ರಸ್ಟ್ ಅಧ್ಯಕ್ಷ ಜಗನ್ನಾಥನ್ ಮುಂತಾದವರು ಭಾಗವಹಿಸಿದ್ದರು.