ಯೋಧರಿಗೆ ಆರತಿ ಬೆಳಗಿ ಸನ್ಮಾನ

ವಿಜಯಪುರ: ಎ.12:ನಗರಕ್ಕೆ ಮುಂಬರುಲಿರುವ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಶಾಂತಿಯುತವಾಗಿ ಮತದಾನ ನಡೆಯಲು ಜಾಗೃತಿ ಮೂಡಿಸಲು ಆಗಮಿಸಿದ್ದ ಅರೆಸೈನಿಕ ಪಡೆಯ ಯೋಧರು ನಿಯೋಜಿತ ಪೋಲಿಸ ಸಿಬ್ಬಂಧಿಯೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ವಜ್ರಹನುಮಾನ ನಗರ ಬಡಾವಣೆಯಲ್ಲಿ ಪಾಂಡು ಸಾವುಕಾರ ನೇತ್ರತ್ವದಲ್ಲಿ ವೈಭವದಿಂದ ಸ್ವಾಗತಿಸಲಾಯಿತು. ಬಡಾವಣೆಯ ಮಹಿಳೆಯರು ಯೋಧರಿಗೆ ಆರತಿ ಬೆಳಗಿ ತಿಲಕವಿಟ್ಟು ಹೂಮಾಲೆ ಹಾಕಿ ಸ್ವಾಗತಿಸಿದರು.