ಯೋಧರಿಂದ ಪಾಕ್ ಡ್ರೋಣ್ ಧ್ವಂಸ

ಪಂಜಾಬ್, ಮೇ.೨೦- ಗಡಿ ಭದ್ರತಾ ಪಡೆಯ ಯೋಧರು ಪಂಜಾಬ್ ನಲ್ಲಿ ಪಾಕಿಸ್ತಾನದ ಎರಡು ಡ್ರೋನ್ ನ್ನು ಹೊಡೆದುರುಳಿಸಿದ್ದಾರೆ.
ಅಮೃತ್ ಸರ ಸೆಕ್ಟರ್ ನಲ್ಲಿ ಈ ಘಟನೆ ವರದಿಯಾಗಿದ್ದು, ಪಾಕಿಸ್ತಾನದಿಂದ ವಾಯುಗಡಿ ಉಲ್ಲಂಘನೆ ಮಾಡಿ ಬಂದ ಡ್ರೋನ್ ಇದಾಗಿತ್ತು ಎಂದು ತಿಳಿದುಬಂದಿದೆ.
ಶೋಧ ಕಾರ್ಯಾಚರಣೆಯಲ್ಲಿ ಡ್ರೋನ್ ನ್ನು ವಶಕ್ಕೆ ಪಡೆಯಲಾಗಿದೆ. ಮತ್ತಷ್ಟು ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ತಿಳಿಸಿದೆ.
ಈ ಹಿಂದೆ ಜನವರಿ ತಿಂಗಳಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಯತ್ನಿಸಿದ ಪಾಕಿಸ್ತಾನದ ಡ್ರೋನ್ ನ್ನು ಇದೇ ಮಾದರಿಯಲ್ಲಿ ಬಿಎಸ್?ಎಫ್ ಹೊಡೆದುರುಳಿಸಿತ್ತು. ಆಗ ಚೀನಾ ನಿರ್ಮಿತ ಪಿಸ್ತೂಲ್ ಗಳು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.