ಯೋಧನಿಗೆ ಸನ್ಮಾನ

ಮುನವಳ್ಳಿ,ಆ6: ಸಮಿಪದ ಯಕ್ಕುಂಡಿ ಗ್ರಾಮದಲ್ಲಿ ಸ್ವ ಗ್ರಾಮಕ್ಕೆ ಆಗಮಿಸಿದ ವೀರ ಯೋಧನಿಗೆ ಸನ್ಮಾನ ಜರುಗಿತು.
ಸಮಾರಂಭದ ಸಾನಿಧ್ಯ ವಹಿಸಿ ಯಕ್ಕುಂಡಿಯ ಕುಮಾರೇಶ್ವರ ಮಠದ ಪಂಚಾಕ್ಷರ ಸ್ವಾಮಿಜಿ ಮಾತನಾಡಿ, ವೃತ್ತಿ ಪೂಜಕನಿಗೆ ನಿವೃತ್ತಿಯ ನಂತರವು ಗೌರವ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ 21 ವರ್ಷಗಳ ಕಾಲ ಸತೀಶ ಕಡಕೊಳ ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಪ್ರಾಮಾಣಿಕ ಸೇವೆಯೆ ಸಾಕ್ಷೀ ಎಂದರು. ಮುಖ್ಯ ಅತಿಥಿಗಳಾಗಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ ಕಡಕೋ¼,À ದೇಶ ಸೇವೆ ಮಾಡುವ ಭಾಗ್ಯ ಸಿಕ್ಕಿದ್ದು ನಿಜಕ್ಕೂ ನನ್ನ ಪೂರ್ವಜರ ಪೂಣ್ಯ. ಇಂತ ಅವಕಾಶವನ್ನು ಪಡೆದುಕೊಂಡ ತಮ್ಮ ಜೀವನ ಸಾರ್ಥಕವಾಗಿದೆ. 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸುಧಿರ್ಘ ಸೇವೆ ಸಲ್ಲಿಸಿ ಯಕ್ಕುಂಡಿ ಗ್ರಾಮದ ಮತ್ತು ಕುಟುಂಬದ ಕೀರ್ತಿ ಹೆಚ್ಚಿಸಿರುವ ಭಾಗ್ಯ ನನ್ನದಾಗಿದೆ ಎಂದರು.
ವೀರ ಯೋಧ ಸತೀಶ ಕಡಕೋಳ 21 ವರ್ಷಗಳ ಬಳಿಕ ಸ್ವಗ್ರಾಮಕ್ಕೆ ಮರಳುತ್ತಿರುವ ಸುದ್ದಿ ತಿಳಿದು ಯಕ್ಕುಂಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳ ಪರವಾಗಿ ಗ್ರಾ ಪಂ ಅಧ್ಯಕ್ಷೆ ಆಯಿಶಾಬಾನು ಅ ಬಾರಿಗಿಡದ, ಉಪಾಧ್ಯಕ್ಷ ವೀರಭದ್ರಯ್ಯಾ ಮಠದ ಹಾಗೂ ಸದಸ್ಯರು ಮತ್ತು ಪಿ ಕೆ ಪಿ ಎಸ್ ವತಿಯಿಂದ ಅಧ್ಯಕ್ಷ ರಾಜೇಶ ಹೊಂಗಲ ಮತ್ತು ಸದಸ್ಯರು ಹಾಗೂ ಎಲ್ಲ ಶಾಲೆಗಳ ಪ್ರಧಾನ ಗರುಗಳು ಮತ್ತು ಶಿಕ್ಷಕರು ಕೂಡಿಕೊಂಡು ವೀರ ಯೋಧನಿಗೆ ಸ್ವಾಗತಕೋರಿ ದೇಶ ಪ್ರೇಮ ಮೆರೆದಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮಂಡಳ ಪ್ರಧಾನರಾದ ಬಸವರಾಜ ಹೊಂಗಲ ವಹಿಸಿದ್ದರು. ಹಿರಿಯರಾದ ಶಂಕರಗೌಡ ಪಾಟೀಲ, ಅಬ್ದುಲ್‍ಖಾದರಜೈಲಾನಿ ಬಾರಿಗಿಡದ, ಬಸನಗೌಡ ಪಾಟೀಲ, ಹಸನಸಾಬ ಬಾರಿಗಿಡದ,ಬಸವರಾಜ ಕಡಕೋಳ,ನಿಜಾಮುದ್ದಿನ ಬಾರಿಗಿಡದ,ಸುರೇಶ ಕಡಕೋಳ, ಚಂದ್ರಕಾಂತ ಸಂಗಟಿ, ಶಿವಶಂಕರ ಕಡಕೋಳ, ಮಕ್ತುಮಸಾಬ ಬಡೆಖಾನ, ಶಿವಾನಂದ ಹೊಂಗಲ, ನಾಗಪ್ಪ ಹಿಟ್ಟಣಗಿ, ಶಿವಾನಂದ ದೊಡವಾಡ, ಡಾ. ಸುರೇಶ ನವಲಗುಂದ, ಬಸವÀರಾಜ ಬಡಿಗೇರ, ಕಲ್ಲಪ್ಪ ಹೊಂಗಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ದಾನಯ್ಯಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.ಮಲ್ಲಪ್ಪ ಕಡಕೋಳ ಸ್ವಾಗತಿಸಿದರು, ಶಿವಾನಂದ ಕಡಕೋಳ ವಂದಿಸಿದರು.