ಯೋಜನೆ ಯಶಸ್ಸಿಗೆ ಸಮುದಾಯದ ಪಾತ್ರ ಮುಖ್ಯ-ದಾಸರ

ಬಾದಾಮಿ, ನ 20- ಗ್ರಾಮೀಣ ಪ್ರದೇಶದಲ್ಲಿ ಶುದ್ಧ ನೀರಿನ ಬಳಕೆ, ಅರಿವು ಮೂಡಿಸುವ ಜವಾಬ್ದಾರಿ ಅಭಿವೃದ್ಧಿ ಅಧಿಕಾರಿಗಳದ್ದಾಗಿದೆ. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸಮುದಾಯದವರ ಪಾತ್ರ ಮಹತ್ತರವಾಗಿದೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಂ.ಜಿ.ದಾಸರ ಹೇಳಿದರು.
ತಾ.ಪಂ.ಸಭಾಭವನದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬಾಗಲಕೋಟೆ, ಜಿಲ್ಲಾ ಪಂಚಾಯತ್ ಹಾಗೂ ವಿನ್ ಸೊಸೈಟಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯೋಜನೆ ಅನುμÁ್ಠನ ಹೇಗೆ ಬಳಕೆ ಮಾಡಬೇಕು. ಜನರಿಗೆ ಯಾವ ರೀತಿ ತಿಳಿವಳಿಕೆ ಕೊಡಬೇಕು, ದಾಖಲಾತಿ ಹೇಗೆ ದೃಡೀಕರಣ ಮಾಡಿಕೊಳ್ಳಬೇಕು ಎಂದು ಉದಾಹರಣೆ ಸಮೇತ ಮಾಹಿತಿ ನೀಡಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಮಹತ್ವ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಜಯ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ವಿನ್ ಸೊಸೈಟಿ ಸಿಬ್ಬಂದಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಜೆ ಜೆ ಎಮ್ ಕಾರ್ಯಕ್ರಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಉದ್ದೇಶ, ಗ್ರಾಮೀಣ ಭಾಗದ ಪ್ರತಿ ಮನೆ-ಮನೆಗಳಿಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರನ್ನು 2024ರ ಒಳಗೆ ಒದಗಿಸುವದು, ಸಮುದಾಯವು ಸರ್ಕಾರಕ್ಕೆ ಶೇ. 10% ವಂತಿಗೆ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವದು, ನೀರಿನ ಜಲ ಮೂಲಗಳನ್ನು ಸಂರಕ್ಷಣೆ ಮಾಡುವುದು ಮತ್ತು ಸ್ವಚ್ಛತೆ ಕಾಪಾಡುವದು, ಗ್ರಾಮದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರವಾಗಿ ಬಯಲು ಬಹಿರ್ದೆಸೆಯನ್ನು ಸಂಪೂರ್ಣವಾಗಿ ನಿಲ್ಲಿಸುವದು ಹಾಗೆಯೇ ಬೀದಿಯಲ್ಲಿ ಹರಿಯುವ ಬಳಸಿದ ನೀರನ್ನು ಇಂಗು ಗುಂಡಿಯನ್ನು ಬಳಸುವದರ ಮೂಲಕ ಗ್ರಾಮದ ಸ್ವಚ್ಛತೆಗೆ ಮಹತ್ವ ನೀಡಬೇಕೆಂದು ಹೇಳಿದರು. ಶಿವಾನಂದ ಬಿಜ್ಜರಗಿ ಕಾರ್ಯಕ್ರಮವನ್ನು ನಿರೂಪಿಸಿದರು. ವಸಂತ ದಾದನಟ್ಟಿ ವಂದಿಸಿದರು.