ಯೋಜನೆ ಗುರಿ ತಲುಪಲು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ- ಜಿಲ್ಲಾಧಿಕಾರಿ

ರಾಯಚೂರು,ಜು.೨೮-ಕೇಂದ್ರ ಸರಕಾರದ ಸಾಮಾಜಿಕ ಭದ್ರತೆ ಯೋಜನೆ ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯಲು ನಿರ್ದಿಷ್ಟ ಗುರಿ ತಲುಪುವಂತೆ ವಿವಿಧ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಅವರು ಸೂಚನೆ ನೀಡಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಜನರ ಜೀವನಪಯೋಕ್ಕಾಗಿ ಆರ್ಥಿಕವಾಗಿ ಪ್ರಬಲವಾಗಲು ಕೇಂದ್ರ ಸರಕಾರ ವಿವಿಧ ಯೋಜನೆಗಳಾದ ಪ್ರಧಾನಿ ಮಂತ್ರಿ ಜೀವನ ಜ್ಯೋತಿ ಹಾಗೂ ಪ್ರಧಾನಿ ಮಂತ್ರಿ ಸುರಕ್ಷಾ ಭೀಮ ಯೋಜನೆ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರನ್ನು ಹೆಚ್ಚಾಗಿ ಸೆಳೆಯಬೇಕು ಹಾಗೂ ನರೇಗಾ ಮತ್ತು ವಿವಿಧ ಸರಕಾರಿ ಕಾಮಗಾರಿಗಳ ಯೋಜನೆ ಅಡಿಯಲ್ಲಿ ಖಾತೆ ತೆಗುಯುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಸಲಹೆ ನೀಡಿದರು.
ಕೇಂದ್ರ ಸರಕಾರದ ವಿಧಿಸಿರುವ ನಿರ್ದಿಷ್ಟ ಗುರಿಯೊಂದಿಗೆ ಬ್ಯಾಂಕ್ ವ್ಯವಸ್ಥಾಪಕರು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ವಾರ್ಷಿಕ ನವೀಕರಣದ ಆಧಾರದ ಮೇಲೆ ೧೮ ರಿಂದ ೭೦ ವರ್ಷ ವಯಸ್ಸಿನ ಜನರಿಗೆ ಈ ಯೋಜನೆ ಲಭ್ಯವಿರುತ್ತದೆ.ಯೋಜನೆಯಡಿಯಲ್ಲಿ ಅಪಘಾತದ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ ರೂ.೨ ಲಕ್ಷ ಮತ್ತು ರೂ. ಭಾಗಶಃ ಅಂಗವೈಕಲ್ಯಕ್ಕೆ ೧ ಲಕ್ಷ ಸಹಾಯಧನ ಲಭ್ಯವಿರುತ್ತದೆ. ಬ್ಯಾಂಕ್ ಖಾತೆದಾರರಿಂದ ವಾರ್ಷಿಕ ೨೦ ಕಡಿತಗೊಳಿಸಿ ಸೌಲಭ್ಯ ಒದಗಿಸಲಾಗುತ್ತದೆ ಎಂದರು. ಸಭೆಯಲ್ಲಿ ಸಿಟಿ ಯೂನಿಯನ್ ಬ್ಯಾಂಕ್ ಹಾಗೂ ಕರೂರು ವೈಶ್ಯ ಬ್ಯಾಂಕ್ ವ್ಯವಸ್ಥಾಪಕರು ಸಭೆಗೆ ಗೈರು ಆಗಿದ್ದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಮ್ಯಾನಜೇರ್ ಬಾಬು ಬಳಗನೂರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ಉಪಸ್ಥಿತರಿದ್ದರು.