ಯೋಜನೆಯ ಸದುಪಯೋಗ ಪಡೆದುಕೊಳ್ಳಿ

ಇಂಡಿ:ಜ.19:ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ, ಬಡವರಿಗಾಗಿ, ಮಹಿಳೆಯರಿಗಾಗಿ, ಬುಡಕಟ್ಟು ಜನರಿಗಾಗಿ, ನಿರ್ಲಕ್ಷಿತರಿಗೆ, ವಿಕಲಚೇತನರಿಗಾಗಿ ,ದುಡಿಯುವ ಜನತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಇಂಡಿ ಪಟ್ಟಣದ ಎಸ್ ಬಿ ಐ ವ್ಯವಸ್ಥಾಪಕ ಆರ್.ಜಿ.ರಾಮಸ್ವಾಮಿ ಕರೆ ನೀಡಿದರು.
ಪಟ್ಟಣದ ಪುರಸಭೆಯ ಎದುರು ಒಂದು ದೊಡ್ಡ ಪರದೆಯ ಮೇಲೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಪ್ರದರ್ಶನ ಮಾಡಿ ಮಾತನಾಡಿದರು.
ಇತ್ತೀಚೆಗೆ ಸರ್ಕಾರಗಳು ಮನೆ ಮನೆಗಳಿಗೆ ಬೆಳೆ ಸಾಲ ಮಂಜೂರು ಮಾಡುತ್ತಿದೆ. ಇದು ರೈತರಿಗೆ ಅತೀ ಉಪಯೋಗವಾಗಿದೆ. ಇದನ್ನು ರೈತರು ಪಡೆದುಕೊಂಡು ಹೆಚ್ಚಿನ ಉತ್ಪಾದನೆ ಮಾಡಿಕೊಳ್ಳಬೇಕು. ಇದರಂತೆ ರೈತರಿಗೆ ಇನ್ನೂ ಅನೇಕ ರೀತಿಯ ಸಾಲಗಳನ್ನು ನೀಡಲು ಮುಂದಾಗಿದೆ. ರೈತರು ಬ್ಯಾಂಕಿಗೆ ಭೇಟಿ ನೀಡಿ ಅವುಗಳ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ನಾವು ಈಗಾಗಲೇ ತಾಲೂಕಿನ 7 ಕಡೆ ಸರಕಾರದ ಯೋಜನೆಗಳ ಬಗ್ಗೆ ಪ್ರಚಾರ ಕಾರ್ಯ ಮಾಡಿದ್ದೇವೆ. ಪಟ್ಟಣದಲ್ಲಿ ಇದು ಮೊದಲನೇ ಸಲ ಪ್ರಚಾರ ಮಾಡುತ್ತಿದ್ದೇವೆ. ಜನ ಸಾಮಾನ್ಯರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕ ಬೆಳವಣಿಗೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಸ್.ಬಿ. ಐ ಸಿಬ್ಬಂದಿಗಳಾದ ರವಿ ತೇಜಾ, ಪರಶುರಾಮ ತೆನಿಹಳ್ಳಿ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಮಾಹಿತಿ ಪುಸ್ತಕಗಳನ್ನು ವಿತರಣೆ ಮಾಡಿದರು.