ಯೋಜನೆಯ ಸದುಪಯೋಗ ಪಡೆದುಕೊಳ್ಳಿ

ಗದಗ,ಅ17 : ಪಿಎಂ ಸ್ವನಿಧಿ ಸೇ ಸಮೃದ್ಧಿ ಯೋಜನೆಯ ಸದುಪಯೋಗವನ್ನು ಎಲ್ಲ ಬೀದಿ ಬದಿ ವ್ಯಾಪಾರಿಗಳು ಪಡೆಯಬೇಕೆಂದು ಪಿಎಂ ಸ್ವನಿಧಿ ಯೋಜನೆಯ ಕನ್ವಿನರ್ ಮತ್ತು ಮಾಜಿ ಸಚಿವ ರಾಮದಾಸ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಇತ್ತೀಚೆಗೆ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ 09 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿಯವರ ಪಿ.ಎಂ ಸ್ವನಿಧಿ ಸೇ ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಕುಂದು ಕೊರತೆಗಳನ್ನು ಮತ್ತು ಅವರುಗಳಿಗೆ ಒದಗಿಸುತ್ತಿರುವ ಯೋಜನೆಗಳ ಕುರಿತು ಮಾತನಾಡುತ್ತಾ ಸ್ವ-ನಿಧಿ ಸೇ ಸಮೃದ್ಧಿ ಯೋಜನೆಯಲ್ಲಿ ವಿವಿಧ ಯೋಜನೆಗಳಾದ ಪಿ.ಎಂ. ಮಾತೃ ವಂದನಾ , ಪಿ.ಎಂ. ಸುರಕ್ಷಾ ಭಿಮಾ, ಪಿ.ಎಂ. ಜನ್-ಧನ್, ಪಿ.ಎಂ. ಶ್ರಮಯೋಗಿ ಮಾನ್-ಧನ್, ಪಿ.ಎಂ. ಜೀವನ ಜ್ಯೋತಿ ಭಿಮಾ , ಜನನಿ ಸುರಕ್ಷಾ ಯೋಜನೆ, ಕಟ್ಟಡ ಮತ್ತು ಇತರೆ ಕಾರ್ಮಿಕ ನೊಂದಣಿ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ 5091 ಬೀದಿ ವ್ಯಾಪಾರಿಗಳು ಸಾಲ ಸೌಲಭ್ಯವನ್ನು ಪಡೆದಿದ್ದು ಪ್ರಧಾನಮಂತ್ರಿ ಪಿ.ಎಂ.ಸ್ವನಿಧಿ ಯೋಜನೆಯ ಫಲಾನುಭವಿಗಳಿಗೆ ಪರಿಚಯ ಬೋರ್ಡ್ ವಿತರಿಸಿದರು. ಮಂಜೂರಾತಿಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಿದರು.
ಶಿರಹಟ್ಟಿ ಶಾಸಕರಾದ ಡಾ. ಚಂದ್ರು ಲಮಾಣಿ, ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಉಮಾ ಎಸ್. ಪಾಳೇಗಾರ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಸ್ಥಾಪಕರು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಜಿಲ್ಲೆಯ ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷರಾದ ಮುಕ್ತುಮಸಾಬ ನಾಲಬಂದ, ನಗರಸಭೆಯ ಬೀದಿ ವ್ಯಾಪಾರಿಗಳ ಸಂಘದ ಸದಸ್ಯರಾದ ಅನ್ವರ ಶಿರಹಟ್ಟಿ , ಭಾಷಾಸಾಬ ಮಲಸಮುದ್ರ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಹಾಗೂ ಅಮರೇಶ ಆರ್ , ಕಾರ್ತಿಕ್ ಸಿಬ್ಬಂದಿಗಳು ಹಾಜರಿದ್ದರು.