ಯೋಜನೆಯಿಂದ ಮಹಿಳೆಯರ ಆತ್ಮಬಲ ಹೆಚ್ಚಿದೆ

(ಸಂಜೆವಾಣಿ ವಾರ್ತೆ)
ಗುಳೇದಗುಡ್ಡ,ಸೆ1: ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ತಂದಿರುವ ಮಹತ್ವದ ಐದು ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಶಿಲ್ಪಾ ಹಳ್ಳಿ ಹೇಳಿದರು.
ಅವರು ಪುರಸಭೆ ಕಾರ್ಯಾಲಯದ ಆಶ್ರಯದಲ್ಲಿ ಹೊಸ ಬಾಲಾಜಿ ಪಂಚಾಯತ ವಾಡಾದಲ್ಲಿ ನಡೆದ ಮೈಸೂರಿನಲ್ಲಿ ಲೋಕಾರ್ಪಣೆ ಗೊಳಿಸಿದ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ನೇರ ಪ್ರಸಾರದ ಉದ್ಘಾಟನಾ ಸಮಾರಂಭದಲ್ಲಿ ದೀಪಬೆಳಗಿಸಿ ಮಾತನಾಡಿ, ಇದರಿಂದ ಮಹಿಳೆಯರ ಆತ್ಮಬಲ ಮತ್ತಷ್ಟು ಹೆಚ್ಚುತ್ತದೆ. ಅಲ್ಲದೆ ಆ ಹಣ ಕುಟುಂಬದ ಅಡಚಣಿ, ಮಕ್ಕಳ ಶಿಕ್ಷಣ, ಆರೋಗ್ಯ ಇತ್ಯಾದಿ ಸಂಕಷ್ಟ ಕಾಲದಲ್ಲಿ ನೆರವಾಗಲಿದೆ. ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಂಡು ಸಮಾಜದಲ್ಲಿ ಸಶಕ್ತರಾಗಬೇಕೆಂದು ಹೇಳಿದರು.
ಯಲ್ಲಪ್ಪ ಮನ್ನಿಕಟ್ಟಿ, ವಿದ್ಯಾ ಮರಗೋಡ, ವಿನೋದ ಮದ್ದಾನಿ, ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ವಂದನಾ ಭಟ್ಟಡ, ಅಮರೇಶ ಕವಡಿಮಟ್ಟಿ, ನೂಡಲ್ ಅಧಿಕಾರಿ ಕುಮಾರ ತಟ್ಟಿಮಠ, ತಿಮ್ಮಣ್ಣ, ಹುಲಗಪ್ಪ ಚಲವಾದಿ, ಗೋಪಾಲ ಭಟ್ಟಡ, ಪ್ರಕಾಶ ಮುರಗೋಡ, ಶಿವಶಂಕ್ರಪ್ಪ ಸಾರಂಗಿ ಸೇರಿದಂತೆ ಇತರ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರು ಪಾಲ್ಗೊಂಡಿದ್ದರು.