ಯೋಜನೆಗಳ ಸಾರ್ಥಕ ಪ್ರಯೋಜನ ಪಡೆದುಕೊಳ್ಳಿ:ದರ್ಶನಾಪೂರ

ಶಹಾಪುರ:ಜ.11: ತೋಟದಲ್ಲಿ ತರಕಾರಿ ಬೆಳೆಯುವ ರೈತರಿಗೆ ಅನುಕೂಲವಾಗಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ತರಕಾರಿ ಬೀಜಗಳು ಉಚಿತವಾಗಿ ನೀಡುತ್ತಿದ್ದು, ರೈತರು ಯೋಜನೆಗಳ ಸಾರ್ಥಕ ಉಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ಭೀ.ಗುಡಿಯಲ್ಲಿ ಆಯ್ದ ಫಲಾನುಭವಿ ರೈತರಿಗೆ ತರಕಾರಿ ಬೀಜವನ್ನು ವಿತರಿಸಿ ಅಭಿಪ್ರಾಯ ಹಂಚಿಕೊಂಡ ಅವರು, ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಸಂಘದಿಂದ ಶಿಕ್ಷಣ ಕೃಷಿ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರಗಳು ಸೇರಿದಂತೆ, ಹಲವು ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು.
ವಿಕಾಸ ಅಕಾಡೆಮಿ ಸಂಚಾಲಕರಾದ ಅಮೃತರಾವ ಮುಲಗೆ, ಹಿರಿಯರಾದ ಭೀಮರೆಡ್ಡಿ ಬೈರೆಡ್ಡಿ, ಧುರೀಣರಾದ ಶಿವಮಹಾಂತ ಚಂದಾಪುರ, ಸಂಚಾಲಕರದ ಶಿವುರೆಡ್ಡಿ ಸಿಂಗನಹಳ್ಳಿ, ಸಾಗರ ಹೋತಪೇಟ, ಸೋಮಶೇಖರ ಸಗರ, ಪರಶುರಾಮ ದೋರನಳ್ಳಿ, ಭೀಮಾಶಂಕರ ಸೇರಿದಂತೆ ಇತರರು ಇದ್ದರು.