ಯೋಜನೆಗಳ ಸದುಯೋಗಕ್ಕೆ ಕರೆ

ಚನ್ನಮ್ಮನ ಕಿತ್ತೂರ,ಜು.14: ಸರ್ಕಾರ ಸಾರ್ವಜನಿರಿಗೆ ಅನೂಕೂಲವಾಗಲೆಂದು ಸುಮಾರು ಯೋಜನೆಗಳನ್ನು ಜಾರಿಗೆ ತಂದಿದೆ. ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ತಾಲೂಕ ಪಂಚಾಯತಿ ಕಛೇರಿ ಆವರಣದಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಸ್ವಚ್ಛ ವಾಹಿನಿ ವಾಹನಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿಯವರು ದೇಶವನ್ನೇಸ್ವಚ್ಛ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನಾವು ನಮ್ಮ ಗ್ರಾ.ಪಂ.ಗೆ ಒಳಪಡುವ ಗ್ರಾಮಗಳನ್ನು ಸ್ವಚ್ಛಗೊಳಿಸಲಿಕ್ಕೆ ಸರ್ಕಾರ ಸ್ವಚ್ಛವಾಹಿನಿ ವಾಹನವನ್ನು ನೀಡಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ್ ಸಂಪಗಾಂವಿ ಮಾತನಾಡಿ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ಮತ್ತು ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ನೆಮ್ಮದಿಯ ಜೀವನ ಸಾಗಿಸಬಹುದು ಮತ್ತು ರೋಗ ರುಜನಿಗಳಿಂದ ದೂರವಿರಬಹುದೆಂದರು. ಗ್ರಾ.ಪಂ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಸ್ವಚ್ಛತೆ ಅರಿವು ಮೂಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ಡಾ|| ಬಸವರಾಜ ಪರವನ್ನವರ, ಮುಖಂಡರುಗಳಾದ ಉಳವಪ್ಪ ಉಳ್ಳಾಗಡ್ಡಿ, ಪ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರುಗಳು ,ಸದಸ್ಯರು, ಪಿಡಿಓಗಳು, ಗ್ರಾ.ಪಂ. ಮತ್ರು ಪ.ಪಂ. ಹಾಗೂ ತಾ.ಪಂ. ಸಿಬ್ಬಂದಿಗಳು ಸಾರ್ವಜನಿಕರು, ಗಣ್ಯರು ಉಪಸ್ಥಿತರಿದ್ದರು.